ಐಪಿಎಲ್: ಕೆಕೆಆರ್-ಎಂಐ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

ದುಬೈ: ದುಬೈಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 23) ಇಂಡಿಯನ್ ಪ್ರೀಮಿಯರ್ ಲೀಗ್ 5ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಲಿವೆ. ಬಲಿಷ್ಠ ತಂಡಗಳೆರಡರ ಈ ಕಾಳಗ ಕುತೂಹಲ ಮೂಡಿಸಿದೆ.
ಮುಂಬೈ ಇಂಡಿಯನ್ಸ್‌ಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕರಾಗಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಸಂಜೆ 7.30 pmಗೆ ಪಂದ್ಯ ಆರಂಭವಾಗಲಿದೆ. ಕೆಕೆಆರ್‌ಗೆ ಇದು ಟೂರ್ನಿಯ ಮೊದಲ ಪಂದ್ಯವಾಗಿದ್ದರೆ, ಎಂಐಗೆ ಇದು ಎರಡನೇ ಪಂದ್ಯ. ಆರಂಭಿಕ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ವಿರುದ್ಧ ಸೋತಿತ್ತು.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಐಪಿಎಲ್ ಇತಿಹಾಸದಲ್ಲಿ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಸಾಕಷ್ಟು ಸಾರಿ ಮುಖಾಮುಖಿಯಾಗಿವೆ. ಈವರಗೆ ಎರಡೂ ತಂಡಗಳು ಒಟ್ಟು 25 ಪಂದ್ಯಗಳನ್ನಾಡಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಹೆಚ್ಚಿನ ಪಂದ್ಯಗಳನ್ನು ಎಂಐ ಗೆದ್ದಿದೆ.
ಒಟ್ಟು 25 ಮುಖಾಮುಖಿಗಳಲ್ಲಿ ಎಂಐ ತಂಡ 19 ಗೆಲುವುಗಳನ್ನು ದಾಖಲಿಸಿದ್ದರೆ, ಕೆಕೆಆರ್ ಗೆದ್ದಿದ್ದು ಕೇವಲ 6 ಪಂದ್ಯಗಳಲ್ಲಿ. ವಿಶೇಷವೆಂದರೆ 2014ರ ಸೀಸನ್‌ನಲ್ಲಿ ಕೆಕೆಆರ್ 2 ಪಂದ್ಯಗಳನ್ನು ಗೆದ್ದಿತ್ತು. ಇದೇ ಆ ತಂಡ ಸೀಸನ್ ಒಂದರಲ್ಲಿ ಎಂಐ ವಿರುದ್ಧ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು. ಉಳಿದೆಲ್ಲ ಸೀಸನ್‌ಗಳಲ್ಲಿ ಕೆಕೆಆರ್ ಹೆಚ್ಚಿನ ಪಂದ್ಯಗಳನ್ನು ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications