ಐಪಿಎಲ್ 2020: ಕೆಕೆಆರ್ vs ಎಂಐ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಗೆಲುವಿಗಾಗಿ ಎದುರು ನೋಡುತ್ತಿದೆ. ಬುಧವಾರ (ಸೆಪ್ಟೆಂಬರ್ 23) ನಡೆಯಲಿರುವ 5ನೇ ಪಂದ್ಯದಲ್ಲಿ ಮುಂಬೈ ತಂಡ ಎರಡು ಬಾರಿ ಟ್ರೋಫಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಪಂದ್ಯ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ 7.30 pmಗೆ ಆರಂಭವಾಗಲಿದೆ.
ಎರಡೂ ತಂಡಗಳು ಈ ಹಿಂದೆ ಒಟ್ಟಿಗೆ 25 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಎಂಐ ತಂಡ 19 ಗೆಲುವುಗಳನ್ನು ದಾಖಲಿಸಿದ್ದರೆ, ಕೆಕೆಆರ್ ಗೆದ್ದಿದ್ದು ಕೇವಲ 6 ಪಂದ್ಯಗಳಲ್ಲಿ. ಹಾಗಂತ ಈ ಬಾರಿಯೂ ಕೆಕೆಆರ್ ಸೋಲುತ್ತದೆ ಎಂದೇನಿಲ್ಲ. ಉತ್ತಮ ಪ್ರದರ್ಶನ ನೀಡಬಲ್ಲ ಬಲಿಷ್ಠ ತಂಡ ಕೆಕೆಆರ್‌ನಲ್ಲಿದೆ.
ಕೋಲ್ಕತ್ತಾ ಮತ್ತು ಮುಂಬೈ ತಂಡಗಳ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಮಾಹಿತಿಗಳು ಕೆಳಗಿವೆ.

ತಂಡಗಳ ಬಲಾಬಲ
ಮುಂಬೈಗೆ ರೋಹಿತ್ ಶರ್ಮಾ ನಾಯಕರಾಗಿದ್ದರೆ, ಕೋಲ್ಕತ್ತಾಕ್ಕೆ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಆಗಿದ್ದಾರೆ. ಕೆಕೆಆರ್ ಕೋಚ್ ಬ್ರೆಂಡನ್ ಮೆಕಲಮ್ ಅಂತೂ ಈ ಬಾರಿ ಮೂರನೇ ಟ್ರೋಫಿ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ. ಮುಂಬೈಯಲ್ಲಿ ರೋಹಿತ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಇದ್ದರೆ, ಕೆಕೆಆರ್‌ನಲ್ಲಿ ದಿನೇಶ್ ಕಾರ್ತಿಕ್, ಶುಭ್‌ಮಾನ್ ಗಿಲ್, ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್‌ನಂತ ಬಲಿಷ್ಠರಿದ್ದಾರೆ.

ಪಿಚ್ ಮತ್ತು ಹವಾಮಾನ
ಅಬುಧಾಬಿ ಪಿಚ್ ಬೌಲರ್‌ಗಳಿಗೆ ಫ್ರೆಂಡ್ಲಿ ಆಗಿರಲಿದೆ. ಬೌಲರ್‌ಗಳೇ ಪಂದ್ಯದ ನಿರ್ಧಾರಕರಾಗಲಿದ್ದಾರೆ. ಪಿಚ್ ಮೇಲ್ಭಾಗ ವೇಗಿಗಳಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಬೌಲರ್‌ಗಳು ತಂಡಕ್ಕೆ ಬಲವಾಗಿ ನಿಲ್ಲಬಲ್ಲರು. ಬ್ಯಾಟ್ಸ್‌ಮನ್‌ಗಳು ಎಚ್ಚರಿಯಿಂದ ಆಡಬೇಕಷ್ಟೇ. ಇನ್ನು ಅಬುಧಾಬಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರೀ ಸೆಲ್ಶಿಯನ್ ಇದ್ದು ಕನಿಷ್ಠ ತಾಪಮಾನ 30 ಡಿಗ್ರೀ ಸೆಲ್ಶಿಯಸ್ ಇರಲಿದೆ.

ಕೆಕೆಆರ್ ಸಂಭಾವ್ಯ XI
ಸುನಿಲ್ ನರೈನ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ಸಿ, ವಿಕೆ), ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಕಮಲೇಶ್ ನಾಗರ್ಕೋಟಿ/ಸಂದೀಪ್ ವಾರಿಯರ್, ಶಿವಂ ಮಾವಿ, ಪ್ರಸಿದ್ಧ್ ಕೃಷ್ಣ.

ಎಂಐ ಸಂಭಾವ್ಯ XI
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications