ಐಪಿಎಲ್ 2020: ಕೊಲ್ಕತ್ತಾ vs ಮುಂಬೈ , ಟಾಸ್ ವರದಿ, ಫೈನಲ್ ಪ್ಲೇಯಿಂಗ್ XI

ಐಪಿಎಲ್ ಅಂಗಳದಲ್ಲಿ ಇಂದು ಐದನೇ ಪಂದ್ಯಕ್ಕೆ ಚಾಲನೆ ದೊರೆತಿದೆ. ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈ ಪಂದ್ಯದ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಈ ಆವೃತ್ತಿಯನ್ನು ಆರಂಭಿಸಲಿದೆ. ಆದರೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಇದು ಎರಡನೇ ಮುಖಾಮುಖಿಯಾಗಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶರಣಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಎರಡೂ ತಂಡಗಳ ಅಭಿಮಾನಿಗಳಿಗೆ ಇದೆ.
ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಯುಎಇನಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಸೋತು ಕೆಟ್ಟ ದಾಖಲೆಯನ್ನು ಹೊಂದಿದೆ. ಇಂದಿನ ಪಂದ್ಯದಲ್ಲಾದರೂ ಗೆಲ್ಲುವ ಮೂಲಕ ಯುಎಇ ಅಂಗಳದ ಸೋಲಿನ ಸರಪಳಿಯನ್ನು ಮುರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕೊಲ್ಕತ್ತಾ ನೈಟ್‌ರೈಡರ್ಸ್ ಆಡುವ ಬಳಗ: ಸುನಿಲ್ ನರೈನ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯೊನ್ ಮೋರ್ಗಾನ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್ ಕೀಪರ್), ನಿಖಿಲ್ ನಾಯಕ್, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಸಂದೀಪ್ ವಾರಿಯರ್, ಶಿವಂ ಮಾವಿ
ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications