ಐಪಿಎಲ್ 2020: ಕೆಕೆಆರ್vs ಆರ್‌ಸಿಬಿ: ಇಯಾನ್ ಮಾರ್ಗನ್‌ಗೆ ಇದು 300ನೇ ಟಿ20 ಪಂದ್ಯ

ಕೊಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಆಡಲಿಳಿಯುವ ಮೂಲಕ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಇಂಗ್ಲೆಂಡ್ ತಂಡದ ನಾಯಕನೂ ಆಗಿರುವ ಇಯಾನ್ ಮಾರ್ಗನ್‌ಗೆ ಇದು 300ನೇ ಟಿ20 ಪಂದ್ಯವಾಗಿದೆ.
ಈ ಮೈಲಿಗಲ್ಲನ್ನು ತಲುಪಿದ ಇಂಗ್ಲೆಂಡ್‌ನ ಮೂರನೇ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೆ ಮಾರ್ಗನ್ ಪಾತ್ರರಾಗಿದ್ದಾರೆ. ಇಂಗ್ಲೀಷ್ ಕ್ರಿಕೆಟಿಗರ ಪೈಕಿ ರವಿ ಬೋಪಾರ ಹಾಗೂ ಲೂಕ್ ರೈಟ್ ಮಾತ್ರವೇ ಈ ಸಾಧನೆಯನ್ನು ಮಾಡಿದ್ದಾರೆ. ಒಟ್ಟಾರೆ ಕ್ರಿಕೆಟಿಗರ ಪೈಕಿ ಈ ಸಾಧನೆಯನ್ನು ಮಾಡಿದ 25ನೇ ಆಟಗಾರ ಎನಿಸಿದ್ದಾರೆ ಇಯಾನ್ ಮಾರ್ಗನ್.
ಇಯಾನ್ ಮಾರ್ಗನ್ ಅವರ 300ನೇ ಪಂದ್ಯಕ್ಕಾಗಿ ಕೆಕೆಆರ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶುಭ ಹಾರೈಸಿದೆ. ಪಂದ್ಯದ ಆರಂಭಕ್ಕೂ ಮುನ್ನ "ಈ ದಿನ ಸಂಜೆ ನಮ್ಮ ನಾಯಕ ಇಯಾನ್ ಮಾರ್ಗನ್ 300ನೇ ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅವರಿಗೆ ಶುಭಹಾರೈಸಲು ಜೊತೆಯಾಗಿ" ಎಂದು ಟ್ವೀಟ್ ಮಾಡಲಾಗಿದೆ.
ಕೆಕೆಆರ್ ಪಾಳಯದಲ್ಲಿ ಇಯಾನ್ ಮಾರ್ಗನ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 9 ಇನ್ನಿಂಗ್ಸ್‌ಗಳಲ್ಲಿ ಮಾರ್ಗನ್ 248 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರ ಶುಬ್ಮನ್ ಗಿಲ್ 311 ರನ್ ಗಳಿಸಿ ಈ ಮೊದಲ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯ ಕೆಕೆಆರ್ ಪಾಲಿಗೆ ಮಹತ್ವದ್ದಾಗಿದ್ದು ಗೆದ್ದು ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications