ಐಪಿಎಲ್ 2020: ಕೆಕೆಆರ್vsಎಸ್‌ಆರ್‌ಹೆಚ್: ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಕೊಲ್ಕತಾ

ಐಪಿಎಲ್ 2020 ಆವೃತ್ತಿ ಮತ್ತೊಂದು ರೋಚಕ ಕಾದಾಟಕ್ಕೆ ಭಾನುವಾರ ಸಾಕ್ಷಿಯಾಯಿತು. ಕೊಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಜಿದ್ದಾಜಿದ್ದಿನ ಕಾದಾಟ ಟೈ ಫಲಿತಾಂಶದೊಂದಿಗೆ ಅಂತ್ಯವಾಯಿತು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಸುಲಭವಾಗಿ ಗೆಲುವು ಪಡೆದುಕೊಂಡಿತು.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಾಳಿ ಕೆಕೆಆರ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಆಗಿ ಬ್ಯಾಟಿಂಗ್ ಆರಂಭಿಸಿದ ಕೊಲ್ಕತಾ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿತು. ನಿಧಾನಗತಿಯಲ್ಲಿ ಸಾಗುತ್ತಿದ್ದ ರನ್‌ಗತಿಯನ್ನು ಅಂತಿಮ ಹಂತದಲ್ಲಿ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಚುರುಕು ಮುಟ್ಟಿಸಿದರು. ಅಂತಿಮವಾಗಿ ಕೆಕೆಆರ್ 163 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸವಾಲಿನ ಮೊತ್ತವನ್ನು ಗುರಿಯಾಗಿ ನೀಡಿತ್ತು.

ಸನ್‌ರೈಸರ್ಸ್ ಉತ್ತಮ ಆರಂಭ
ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಕೂಡ ಒಳ್ಳೆಯ ಆರಂಭ ಪಡೆಯಿತು. ಇಂದಿನ ಪಂದ್ಯದಲ್ಲಿ ಆರಂಭಿಕನಾಗಿ ಜಾನಿ ಬೈರ್‌ಸ್ಟೋವ್‌ಗೆ ಕೇನ್ ವಿಲಿಯಮ್ಸನ್ ಸಾಥ್ ನೀಡಿದ್ದರು. ಡೇವಿಡ್ ವಾರ್ನರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಈ ಬದಲಾವಣೆಯಲ್ಲಿ ಯಶಸ್ಸನ್ನು ಕಂಡರಾದರೂ ಗೆಲುವು ಸನ್‌ರೈಸರ್ಸ್‌ಗೆ ಸಾಧ್ಯವಾಗಲಿಲ್ಲ.

ಪೈಪೋಟಿಯ ಕಾದಾಟ
ಪಂದ್ಯದುದ್ದಕ್ಕೂ ಪೈಪೋಟಿಯಲ್ಲೇ ಸಾಗಿದ್ದ ಈ ಕಾದಾಟ ಸನ್‌ರೈಸರ್ಸ್ ಹೈದರಾಬಾದ್‌ನ ನಿಗದಿತ ಇಪ್ಪತ್ತು ಓವರ್ ಮುಗಿಯುವ ವೇಳೆಗೆ ಕೆಕೆಆರ್ ನಿಗದಿಪಡಿಸಿದ ರನ್‌ಗಳಷ್ಟೇ ತನ್ನ ಖಾತೆಯಲ್ಲಿ ಹೊಂದಿತ್ತು. ಹೀಗಾಗಿ ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರವಾಯಿತು.

ಮಿಂಚಿದ ಫರ್ಗ್ಯೂಸನ್
ಕೆಕೆಆರ್ ಪರವಾಗಿ ಲೂಕಿ ಫರ್ಗ್ಯೂಸನ್ ಬೌಲಿಂಗ್‌ನಲ್ಲಿ ಮಿಂಚುಹರಿಸಿದರು. ಮೊದಲಿಗೆ 20 ಓವರ್‌ಗಳ ಆಟದಲ್ಲಿ ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದಿದ್ದ ಫರ್ಗ್ಯೂಸನ್ ಸೂಪರ್ ಓವರ್‌ನಲ್ಲಿ ಅದಕ್ಕಿಂತಲೂ ದೊಡ್ಡ ಆಘಾತವನ್ನು ನೀಡಿದ್ದರು. ಸೂಪರ್ ಓವರ್‌ನಲ್ಲಿ 3 ಎಸೆತಗಳಲ್ಲಿ ಫರ್ಗ್ಯೂಸನ್ 2 ವಿಕೆಟ್ ಉರುಳಿಸಿ ಕೆವಲ 2 ರನ್ ನೀಡಿದ್ದರು.

ಸೂಪರ್ ಓವರ್‌ನಲ್ಲಿ ಸುಲಭ ಗೆಲುವು
ಹೀಗಾಗಿ ಕೆಕೆಆರ್ ತಂಡ ಸೂಪರ್ ಓವರ್‌ನಲ್ಲಿ 3 ರನ್‌ಗಳ ಗುರಿಯನ್ನು ಪಡೆದುಕೊಂಡಿತು. ಈ ಮೊತ್ತವನ್ನು ಕೆಕೆಆರ್ ತಂಡದ ನಾಯಕ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾದರು. ಈ ಮೂಲಕ ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸಿದ ಕೆಕೆಆರ್ 10 ಅಂಕಗಳನ್ನು ಖಾತೆಯಲ್ಲಿಟ್ಟುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications