ಮ್ಯಾಕ್ಸ್‌ವೆಲ್ ಬೆಂಬಲಿಸುತ್ತಿರುವುದಕ್ಕೆ ಕಾರಣ ಬಾಯ್ಬಿಟ್ಟ ಕೆಎಲ್ ರಾಹುಲ್

ದುಬೈ: ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದಿಂದಲೂ ಒಳ್ಳೆಯ ಪ್ರದರ್ಶನ ನೀಡಿಲ್ಲ. ಆದರೂ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್‌ಗೆ ಸ್ಥಾನ ನೀಡಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಕೆXIಪಿ ನಾಯಕ ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಬಹುತೇಕ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್‌ಗೆ ಸ್ಥಾನ ನೀಡಿತ್ತು. ಆದರೆ ಹೆಚ್ಚಿನ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಬೆರಳೆಣಿಕೆಯ ರನ್ ಗಳಿಸಿದ್ದರು. ಬೌಲಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನ ತೋರಿರಲಿಲ್ಲ. ಆದರೆ ಅಕ್ಟೋಬರ್ 20ರಂದು ನಡೆದಿದ್ದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಕೊಂಚ ತಂಡದ ಜವಾಬ್ದಾರಿ ಹೊತ್ತು ಆಡಿದ್ದರು. ಈ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್‌ನಿಂದ ಗೆದ್ದಿತ್ತು.
'ಸಹಜವಾಗಿಯೇ ತಂಡದಲ್ಲಿ ಆಡುವ 11 ಮಂದಿಯೂ ಮೈದಾನದಲ್ಲಿ ಒಳ್ಳೆಯವರಾಗಿರಲು ಸಾಧ್ಯವಿಲ್ಲ. ಆದರೆ ಒಂದು ತಂಡವಾಗಿ ಅವರು ಮ್ಯಾಚ್ ವಿನ್ನರ್‌ಗಳಾಗಿ ಬೆಂಬಲಿಸುತ್ತಾರೆ. ತಂಡಕ್ಕೆ ಇದು ಮುಖ್ಯ,' ಎಂದು ಪಂದ್ಯದ ಬಳಿಕ ಮಾತನಾಡಿದ ರಾಹುಲ್ ವಿವರಿಸಿದ್ದಾರೆ.
'ಒಳ್ಳೆಯ ಫಾರ್ಮ್‌ಗೆ ಬಂದರೆ ಮ್ಯಾಕ್ಸ್‌ವೆಲ್ ಹೇಗಿರುತ್ತಾರೆ ಅನ್ನೋದು ನಮಗೆ ಗೊತ್ತು. ಅವರು ತಂಡಕ್ಕೆ ಒಗ್ಗಟ್ಟು ನೀಡುತ್ತಾರೆ ಮತ್ತು ತಂಡದ ಸಮತೋಲನವನ್ನು ಚೆನ್ನಾಗಿ ಕಾಯುತ್ತಾರೆ. ಮ್ಯಾಕ್ಸಿ ಫಾರ್ಮ್‌ಗೆ ಬರುತ್ತಿರುವುದು ಒಳ್ಳೆಯ ಚಿಹ್ನೆ. ಎಲ್ಲಾ ಬ್ಯಾಟ್ಸ್‌ಮನ್‌ಗಳು ಚೆಂಡು ಹೊಡೆಯಲು ಮತ್ತು ಮಿಡ್ಲ್‌ನಲ್ಲಿ ಹೆಚ್ಚು ನಿಲ್ಲಲು ಬಯಸುತ್ತಾರೆ,' ಎಂದು ರಾಹುಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications