ಭಾರತದ ಬೆಸ್ಟ್ ಟಿ20 ಬ್ಯಾಟ್ಸ್‌ಮನ್‌ನನ್ನು ಹೆಸರಿಸಿದ ಚೋಪ್ರ, ಒಪ್ಪದ ಟಾಮ್ ಮೂಡಿ!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಕೆಎಲ್ ರಾಹುಲ್ ಈ ಬಾರಿಯ ಆವೃತ್ತಿಯಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಉಳಿದುಕೊಂಡಿದ್ದಾರೆ. ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ನಿರಂತರವಾಗಿ ನೀಡುತ್ತಿರುವ ಸ್ಥಿರ ಪ್ರದರ್ಶನದ ಕಾರಣಕ್ಕೆ ಆಕಾಶ್ ಚೋಪ್ರ ಕೆಎಲ್ ರಾಹುಲ್ ಅವರನ್ನು ಭಾರತದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್ ಎಂದಿದ್ದಾರೆ.
ಕೆಎಲ್ ರಾಹುಲ್ ಕಳೆದ ಮೂರು ಐಪಿಎಲ್ ಆವೃತ್ತಿಯಲ್ಲಿ ಸತತವಾಗಿ 500+ ರನ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆಯನ್ನು ಮಾಡಿದ ಮೊದಲ ಆಟಗಾರ ಎನಿಸಿದ್ದಾರೆ. ಈ ಅಂಕಿಅಂಶವನ್ನು ಉಲ್ಲೇಖಿಸಿ ಟೀಮ್ ಇಂಡಿಯಾದ ಮಾಜಿ ಆಟಗಾರ, ವಿಶ್ಲೇಷಕ ಆಕಾಶ್ ಚೋಪ್ರ ತನ್ನ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ಸತತ ಮೂರು ಆವೃತ್ತಿಗಳಲ್ಲಿ 500+
"ಕೆಎಲ್ ರಾಹುಲ್ ಪ್ರಸಕ್ತ ಭಾರತದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್. ಐಪಿಎಲ್‌ನಲ್ಲಿ ಸತತ ಮೂರು ಆವೃತ್ತಿಗಳಲ್ಲಿ ಐನೂರಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರನಾಗಿದ್ದಾರೆ. 150ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಬಹುದು ಎಂದು ರಾಹುಲ್ ತೋರಿಸಿಕೊಟ್ಟಿದ್ದಾರೆ" ಎಂದು ಚೋಪ್ರ ವಿವರಿಸಿದ್ದಾರೆ.

ಚೋಪ್ರ ಅಭಿಪ್ರಾಯಕ್ಕೆ ಮೂಡಿ ಭಿನ್ನರಾಗ
ಆದರೆ ಆಕಾಶ್ ಚೋಪ್ರ ಅವರ ಈ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಸಮ್ಮತಿಸಿಲ್ಲ. ರಾಹುಲ್ ವಿಶ್ವದರ್ಜೆಯ ಬ್ಯಾಟ್ಸ್‌ಮನ್ ಎಂಬುದನ್ನು ಒಪ್ಪಿಕೊಂಡರಾದರೂ ಭಾರತದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್ ಎಂದು ಮೂಡಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಟಾಮ್ ಮೂಡಿ ಟಿ20ಯಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.

"ನನ್ನ ಆಯ್ಕೆ ವಿರಾಟ್ ಕೊಹ್ಲಿ"
"ನಾನು ಟಿ20 ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆತನ ಬಳಿ ಗಮನಾರ್ಹವಾದ ದಾಖಲೆಗಳಿವೆ. ರನ್ ಬೆನ್ನಟ್ಟುವ ಆತನ ಸಾಮರ್ಥ್ಯ ಹಾಗೂ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಎದುರಾಳಿಯನ್ನು ದುರ್ಬಲಗೊಳಿಸುವ ರೀತಿ ಕಾವ್ಯಾತ್ಮಕವಾಗಿರುತ್ತದೆ" ಎಂದಿದ್ದಾರೆ

ರಾಹುಲ್ ವಿಶ್ವ ದರ್ಜೆಯ ಕ್ರಿಕೆಟಿಗ
ಇದೇ ವೇಳೆ ಟಾಮ್ ಮೂಡಿ "ಕೆಎಲ್ ರಾಹುಲ್ ವಿಶ್ವ ದರ್ಜೆಯ ಕ್ರಿಕೆಟಿಗ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ರನ್ ಬೆನ್ನಟ್ಟುವಾಗ ಇಬ್ಬರಲ್ಲಿ ಓರ್ವನನ್ನು ಆಯ್ಕೆ ಮಾಡಲು ಹೇಳಿದರೆ ನನ್ನ ಆಯ್ಕೆ ವಿರಾಟ್ ಕೊಹ್ಲಿ ಆಗಿರುತ್ತದೆ" ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications