'ಕೆಎಲ್ ರಾಹುಲ್ ಆರೆಂಜ್ ಕ್ಯಾಪ್‌ಗಾಗಿ ಆಡ್ತಿದ್ದಾರೆ': ಟ್ವೀಟ್‌ಗಳಲ್ಲಿ ಸಿಟ್ಟು!

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶನಿವಾರ (ಅಕ್ಟೋಬರ್ 10) ನಡೆದ ಪಂದ್ಯದಲ್ಲೂ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ 2 ರನ್ ಸೋಲನುಭವಿಸಿದೆ. ಅಸಲಿಗೆ ಇದು ಪಂಜಾಬ್ ಗೆಲ್ಲಬೇಕಿದ್ದ ಪಂದ್ಯ. ರಾಹುಲ್ 58 ಎಸೆತಗಳಿಗೆ 74 ರನ್ ಕೂಡ ನೀಡಿದ್ದರು. ಆದರೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳಾಗಲಿಲ್ಲ. ಅಲ್ಲದೆ ಈ ಸೋಲಿನೊಂದಿಗೆ ಕೆXIಪಿ ಟೂರ್ನಿಯ 6ನೇ ಸೋಲಿನ ಮುಖಭಂಗ ಅನುಭವಿಸಿದೆ.
ಕೋಲ್ಕತ್ತಾ ವಿರುದ್ಧ ಗೆಲ್ಲಬೇಕಿದ್ದ ಪಂದ್ಯವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡ ಬಳಿಕ ಕಿಂಗ್ಸ್ XI ಪಂಜಾಬ್ ಮತ್ತು ಕೆಎಲ್ ರಾಹುಲ್ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಅವರು ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಳ್ಳುವುದಕ್ಕೋಸ್ಕರ ಆಡುತ್ತಿದ್ದಾರೆಯೇ ಹೊರತು ತಂಡ ಗೆಲ್ಲಿಸುವ ನೆಲೆಯಲ್ಲಿ ಆಡುತ್ತಿಲ್ಲ ಎಂದು ಅನೇಕ ಅಭಿಮಾನಿಗಳು ಟ್ವಿಟರ್ ಮೂಲಕ ತಮ್ಮ ಸಿಡುಕು ತೋರಿಕೊಂಡಿದ್ದಾರೆ.
ರಾಹುಲ್ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾಡಲಾದ ಟ್ವೀಟ್‌ಗಳು ಕೆಳಗಿವೆ.

ಎಸ್‌ಅರ್‌ಎಚ್ ಸೇರಲಿ
ಕೆಎಲ್ ರಾಹುಲ್ ಮುಂದಿನ ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಲಿ. ಆಗ ಅವರು ಆರೆಂಜ್ ಕ್ಯಾಪ್ ಬಗ್ಗೆ ತಲೆ ಕಡೆಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಸಂಪೂರ್ಣವಾಗಿ ತಂಡದ ಗೆಲುವಿನ ಕಡೆಗೆ ಗಮನ ಹರಿಸಬಹುದು ಎಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ.
ತಲೆನೇ ಕೆಡಿಸಿಕೊಂಡಿಲ್ಲ
ಕೆಎಲ್ ರಾಹುಲ್: ನಾನು ಆರೆಂಜ್ ಕ್ಯಾಪ್ ಟೇಬಲ್‌ನಲ್ಲಿ ಈಗಲೂ ಮುಂದಿದ್ದೀನ?
ರಿಸೀವರ್: ಹೌದು ಸರ್. ಆದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಿಮ್ಮ ಸ್ಥಾನ ದೊಡ್ಡ ಚಿಂತೆಗೀಡುಮಾಡಿದೆ.
ಕೆಎಲ್ ರಾಹುಲ್: ಬ್ರೊ, ನಾನು ಆ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ.
ಬದಲಾಗುವ ರಾಹುಲ್
ಆರೆಂಜ್ ಕ್ಯಾಪ್ ತೋರಿಸುವಾಗ ಬದಲಾಗುವ ಕೆಎಲ್ ರಾಹುಲ್ ಎಂದು ನಾಗವಲ್ಲಿ ದೃಶ್ಯವನ್ನಿಟ್ಟುಕೊಂಡು ಮೀಮ್ಸ್ ಅನ್ನು ಇಲ್ಲೊಬ್ಬರು ಹಾಕಿಕೊಂಡು ಅಣಕಿಸಿದ್ದಾರೆ. ಕನ್ನಡದಲ್ಲಿ ಆಪ್ತಮಿತ್ರ ಮತ್ತು ಆಪ್ತರಕ್ಷಕ ಸಿನಿಮಾದ ದೃಶ್ಯವಿದು.
ಸೋತರೂ ಆರೆಂಜ್ ಕ್ಯಾಪ್
ಆಡಿದ ಐದು ಪಂದ್ಯಗಳಲ್ಲಿ 4 ಪಂದ್ಯ ಸೋತರೂ ಕೆಎಲ್ ರಾಹುಲ್ ಮಾತ್ರ ಆರೆಂಜ್ ಕ್ಯಾಪ್ ಧರಿಸಿರುವುದು ಎಂದು ಇಲ್ಲೊಬ್ಬರು ಕಾಲೆಳೆದಿದ್ದಾರೆ. ಅಂದ್ಹಾಗೆ, ಪಂಜಾಬ್ ಈಗಾಗಲೇ 7 ಪಂದ್ಯಗಳನ್ನು ಆಡಿ, 6ರಲ್ಲಿ ಸೋತಿದೆ. ಗೆದ್ದಿದ್ದು ಒಂದೇ ಪಂದ್ಯ. ಅದು ಆರ್‌ಸಿಬಿ ವಿರುದ್ಧ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications