ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!

ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಐಪಿಎಲ್ 2020ರಲ್ಲಿ ಏಳು ಬೀಳು ಕಂಡಿದ್ದು, ಆರಂಭದಿಂದಲೂ ಟ್ರೆಂಡ್ ನಲ್ಲಿದ್ದಾರೆ. ಕ್ರಿಕೆಟ್ ಫ್ಯಾನ್ಸ್ ಜೊತೆಗೂ ಸಮಯ ಸಿಕ್ಕಾಗಲೆಲ್ಲ ಟ್ವಿಟ್ಟರ್, ಇನ್ಸ್ಟಾಗ್ರಾಂ ಮೂಲಕ ಸಂವಹನ ನಡೆಸುತ್ತಾ ಬಂದಿದ್ದಾರೆ.
ಸತತ ಸೋಲಿನ ಬಳಿಕ ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ತಂದಿರುವ ರಾಹುಲ್ ಅವರು ಬ್ಯಾಟ್ಸ್ ಮನ್, ವಿಕೆಟ್ ಕೀಪರ್, ನಾಯಕರಾಗಿ ಮಿಂಚುತ್ತಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಸೂಪರ್ ಓವರ್ ಆಡಿ ಗೆದ್ದಿರುವ ಸಂಭ್ರಮದಲ್ಲಿರುವ ರಾಹುಲ್ ಅವರು ಗೆಲುವಿನಿಂದ ಬೀಗಿಲ್ಲ, ಬಲಿಷ್ಠ ತಂಡವನ್ನು ಸೋಲಿಸಿದ್ದಕ್ಕೆ ಗರ್ವ ಪಟ್ಟಿಲ್ಲ.

9 ಪಂದ್ಯಗಳಿಂದ 525 ರನ್ ಗಳಿಸಿ ಆರೆಂಜ್ ಕ್ಯಾಪ್ ಧರಿಸಿರುವ ಕೆಎಲ್ ರಾಹುಲ್ ಅವರು ಮುಂಬೈ ವಿರುದ್ಧದ ಮೊದಲ ಸೂಪರ್ ಓವರ್ ಕೊನೆಗೆ ರನೌಟ್ ಮಾಡಿದ ರೀತಿ ನೋಡಿ ಹಲವಾರು ಫ್ಯಾನ್ಸ್ ನೀವು ನಮ್ಮ ತಲಾ(ಧೋನಿಗೆ ಹೋಲಿಸಿ) ನಾಯಕ ಎಂದು ಹೊಗಳಿದ್ದಾರೆ. ಆದರೆ, ಹೊಗಳಿಕೆಯನ್ನು ನಯವಾಗಿ ನಿರಾಕರಿಸಿ, ತಲಾ ಎಂದಿದ್ದರೂ ಒಬ್ಬರೇ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.
''ಒಬ್ಬರೇ ತಲಾ ಇರೋದು, ಅದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ'' ಎಂದು ರಾಹುಲ್ ತಮ್ಮ ಮಹಿಳಾ ಅಭಿಮಾನಿಯೊಬ್ಬರ ಟ್ವೀಟಿಗೆ ಉತ್ತರಿಸಿದ್ದಾರೆ.
ಡಿಕಾಕ್ ರನೌಟ್ ಪಂದ್ಯದ ಹೈಲೇಟ್ ಆಗಿದ್ದು, ಇದೇ ರನೌಟ್ ಏನಾದರೂ ಧೋನಿ ಮಾಡಿದ್ದರೆ ಅವರ ಫ್ಯಾನ್ಸ್ ಕೊಂಡಾಡುತ್ತಿದ್ದರು ಎಂದು ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಹೆಚ್ಚಿನ ಪ್ರಶಂಸೆ ಸಿಕ್ಕಿಲ್ಲ ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ರಾಹುಲ್ ಅವರು ಧೋನಿಯಂತೆ ಸಕತ್ ಕೂಲ್ ಹೀಗಾಗಿ, ಅಭಿಮಾನಿಗೆ ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.
ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 77ರನ್ ಬಾರಿಸಿದ್ದ ಕೆಎಲ್ ರಾಹುಲ್ ಅವರು ಸತತವಾಗಿ ಮೂರು ಸೀಸನ್ ನಲ್ಲಿ 500 ಪ್ಲಸ್ ರನ್ ಗಳಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications