ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!
ಅರೇ ಇದೇನಿದು ಎಂದು ಆರ್ ಸಿಬಿ ಫ್ಯಾನ್ಸ್ ಹುಬ್ಬೇರಿಸಬೇಡಿ. ಇದು ಸಾಧ್ಯ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ರಿಸ್ ಗೇಲ್ ರನ್ನು ಮಲ್ಯ ಕರೆ ತಂದಿದ್ದು ಕೂಡಾ ಹೀಗೆ.. ಈಗ ನಿಯಮ ಇನ್ನಷ್ಟು ಫ್ರಾಂಚೈಸಿ ಸ್ನೇಹಿಯಾಗಿದೆ.
ಐಪಿಎಲ್ ಸೀಸನ್ ಮಧ್ಯದಲ್ಲೇ ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರನ್ನು ತಂಡಗಳ ನಡುವೆ ಟ್ರೇಡ್ ಮಾಡಬಹುದಾಗಿದೆ. ಅದೇ ಕಾರಣಕ್ಕೆ ಆರ್ ಸಿಬಿ ಮ್ಯಾನೇಜ್ಮೆಂಟ್ ಏನಾದರೂ ಬಯಸಿದರೆ ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು. ಆದ್ರೆ ಇದೊಂದು ಉದಾಹರಣೆ ಮಾತ್ರ. ಸದ್ಯಕ್ಕೆ ಯಾವ ತಂಡವೂ ಈ ರೀತಿಯ ಮಿಡ್ ಸೀಸನ್ ಆಟಗಾರರ ವರ್ಗಾವಣೆಗೆ ಸಿದ್ಧವಾಗಿಲ್ಲ. ಸದ್ಯಕ್ಕೆ ಈ ವಿಧಾನಕ್ಕೆ ಲಭ್ಯವಾಗಿರುವ ಪಟ್ಟಿಯಂತೂ ಸಿದ್ಧವಿದೆ.
ಐಪಿಎಲ್ 2020ರಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಕೆಲ ಹಿರಿಯ ಆಟಗಾರರಿಗೆ ಕಣಕ್ಕಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ಕಿಂಗ್ಸ್ ಎಲೆವನ್ ಪಂಜಾಬ್ ತಂಡದಲ್ಲಿ ಮಯಾಂಕ್-ಕೆಎಲ್ ರಾಹುಲ್ ಚೆನ್ನಾಗಿ ಆಡುತ್ತಿದ್ದು ಕ್ರಿಸ್ ಗೇಲ್ ಬೆಂಚ್ ಬಿಸಿ ಮಾಡುತ್ತಾ ಪೆವಿಲಿಯನ್ ನಲ್ಲಿದ್ದಾರೆ.
ಅದೇ ರೀತಿ ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಪೃಥ್ವಿ-ಧವನ್ ಯಶಸ್ಸು ಕಾಣುತ್ತಿದ್ದು, ಅಜಿಂಕ್ಯ ರಹಾನೆಗೆ ಅವಕಾಶವೇ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಉತ್ತಮ ಆರಂಭಿಕ ಆಟಗಾರರ ಕೊರತೆ ಅನುಭವಿಸುತ್ತಿರುವ ಫ್ರಾಂಚೈಸಿಗಳು Mid-Season Transfer ಬಳಸಿಕೊಂಡು ಇವರಿಬ್ಬರಲ್ಲಿ ಯಾರನ್ನಾದರೂ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ರೀತಿ ಅದಲು ಬದಲು ವಿಧಾನಕ್ಕೆ ನಿಯಮಗಳೇನು? ಯಾವ ಯಾವ ಆಟಗಾರರು ಪಟ್ಟಿಯಲ್ಲಿದ್ದಾರೆ? ಮುಂದೆ ಓದಿ...

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಮಯಗಳು
* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ.
* ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಆದಿತ್ಯ ತಾರೆ, ಅನುಕೂಲ್ ರಾಯ್, ಮಿಚೆಲ್ ಮೆಕ್ ಕ್ಲೆನ್ಘನ್, ಕ್ರಿಸ್ ಲಿನ್, ನಾಥನ್ ಕೌಲ್ಟರ್ ನೈಲ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್, ದಿಗ್ವಿಜಯ್ ದೇಶ್ ಮುಖ್, ಪ್ರಿನ್ಸ್ ಬಲ್ವಂತ್ ರಾಯ್, ಧವಳ್ ಕುಲಕರ್ಣಿ, ಜಯಂತ್ ಯಾದವ್, ಶೆರ್ಫಾನೆ ರುದರ್ಫೋರ್ಡ್.

ಕಿಂಗ್ಸ್ ಎಲೆವನ್ ಪಂಜಾಬ್
ಕಿಂಗ್ಸ್ ಎಲೆವನ್ ಪಂಜಾಬ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಮುಜೀಬ್ ಉರ್ ರೆಹಮಾನ್, ಮುರುಗನ್ ಅಶ್ವಿನ್, ದೀಪಕ್ ಹೂಡಾ, ಇಶಾನ್ ಪೊರೆಲ್, ಕ್ರಿಸ್ ಜೊರ್ಡಾನ್, ಸಿಮ್ರಾನ್ ಸಿಂಗ್, ತಜೀಂದರ್ ಸಿಂಗ್, ಅರ್ಷ್ ದೀಪ್ ಸಿಂಗ್, ದರ್ಶನ್ ನಲ್ಖಾಂಡೆ, ಕೃಷ್ಣಪ್ಪ ಗೌತಮ್, ಹರ್ದುಸ್ ವಿಲೊಯಿನ್, ಕ್ರಿಸ್ ಗೇಲ್, ಹರ್ಪೀತ್ ಬ್ರಾರ್, ಜಗದೀಶ್ ಸುಚಿತ್, ಮಂದೀಪ್ ಸಿಂಗ್.

ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಟಾಮ್ ಬಂಟನ್, ನಿಖಿಲ್ ನಾಯ್ಕ್, ಅಲಿ ಖಾನ್, ಪ್ರಸಿಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಸಿದ್ದೇಶ್ ಲಾಡ್, ಕ್ರಿಸ್ ಗ್ರೀನ್, ಎಂ ಸಿದ್ದಾರ್ಥ್.

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ವರುಣ್ ಅರೋನ್, ಕಾರ್ತಿಕ್ ತ್ಯಾಗಿ, ಓಶಾನೆ ಥಾಮಸ್, ಅನಿರುಧ್ ಜೋಶಿ, ಯಶಸ್ವಿ ಜೈಸ್ವಾಲ್, ಆಂಡ್ರ್ಯೂ ಟೈ, ಅಕಾಶ್ ಸಿಂಗ್, ಅನುಜ್ ರಾವತ್, ಮಯಾಂಕ್ ಮಾರ್ಕಂಡೆ, ಅಂಕಿತ್ ರಾಜಪೂತ್, ಮನನ್ ವೋಹ್ರಾ, ಮಹಿಪಾಲ್ ಲೊಮ್ರೂರ್, ಶಶಾಂಕ್ ಸಿಂಗ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಜೋಶ್ ಫಿಲಿಫೆ, ಕ್ರಿಸ್ ಮೊರಿಸ್, ಡೇಲ್ ಸ್ಟೇನ್, ಶಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆಡಂ ಝಂಪಾ, ಗುರ್ ಕೀರತ್ ಸಿಂಗ್ ಮಾನ್, ಮೋಯಿನ್ ಅಲಿ, ಮೊಹಮ್ಮದ್ ಸಿರಾಜ್, ಪಾರ್ಥೀವ್ ಪಟೇಲ್, ಪವನ್ ನೇಗಿ, ಉಮೇಶ್ ಯಾದವ್.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಕೆಎಂ ಆಸಿಫ್, ಇಮ್ರಾನ್ ತಾಹೀರ್, ನಾರಾಯಣ್ ಜಗದೀಶನ್, ಕರ್ಣ್ ಶರ್ಮ, ಮಿಚೆಲ್ ಸಾಂಟ್ನರ್, ಮೊನು ಕುಮಾರ್, ಋತುರಾಜ್ ಗಾಯಕ್ವಾದ್, ಶಾರ್ದೂಲ್ ಠಾಕೂರ್, ಆರ್ ಸಾಯಿ ಕಿಸೋರ್, ಜೋಶ್ ಹೇಜಲ್ವುಡ್.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಅಜಿಂಕ್ಯ ರಹಾನೆ, ಕೀಮೋ ಪಾಲ್, ಸಂದೀಪ್ ಲಾಮಿಚಾನೆ, ಅಲೆಕ್ಸ್ ಕ್ಯಾರಿ, ಆವೇಶ್ ಖಾನ್, ಹರ್ಷಲ್ ಪಟೇಲ್, ಇಶಾಂತ್ ಶರ್ಮ, ಲಲಿತ್ ಯಾದವ್, ಡೇನಿಯಲ್ ಸ್ಯಾಮ್ಸ್, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮ.

ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಮಿಡ್ ಸೀಸನ್ ಆಟಗಾರರ ವರ್ಗಾವಣೆ ಲಭ್ಯವಿರುವ ಆಟಗಾರರ ಪಟ್ಟಿ ಹೀಗಿದೆ:
ಶ್ರೀವತ್ಸ್ ಗೋಸ್ವಾಮಿ, ಸಿದ್ದಾರ್ಥ್ ಕೌಲ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ವಿರಾಟ್ ಸಿಂಗ್, ಬವನಕ ಸಂದೀಪ್, ಫಾಬಿಯಾನ್ ಅಲೆನ್, ಸಂಜಯ್ ಯಾದವ್, ಬಸಿಲ್ ಥಾಂಪಿ, ಬಿಲ್ಲಿ ಸ್ಟಾನ್ಲೆಕ್, ಮೊಹಮ್ಮದ್ ನಬಿ, ಸಂದೀಪ್ ಶರ್ಮ, ಶಾಬಾಜ್ ನದೀಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications