Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತಿ ಹೆಚ್ಚು ಶತಕದ ಜೊತೆಯಾಟ ದಾಖಲೆ ಬರೆದ ಕೊಹ್ಲಿ-ಎಬಿಡಿ

IPL 2020: Kohli-ABD become the first pair to share 10 century partnerships

ಶಾರ್ಜಾ ಮೈದಾನದಲ್ಲಿ ಎಲ್ಲಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡುವಾಗ ಲೀಲಾಜಾಲವಾಗಿ ಸಿಕ್ಸರ್ ಎತ್ತಿದ ಎಬಿಡಿ ಒಂದು ಕಡೆಯಾದರೆ, 19ನೇ ಓವರ್ ತನಕ ಬೌಂಡರಿ ಗಳಿಸದೆ ಸಿಂಗಲ್, ಡಬ್ಬಲ್ ರನ್ ಕದಿಯುತ್ತಾ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಇನ್ನೊಂದೆಡೆ ಎಲ್ಲರನ್ನು ಮೋಡಿ ಮಾಡಿದರು.

ಮೈದಾನದ ಒಳಗೂ-ಹೊರಗೂ ಉತ್ತಮ ಬಾಂಧವ್ಯ ,ಹೊಂದಾಣಿಕೆ ಹೊಂದಿರುವ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಇಬ್ಬರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರದಂದು ನಡೆದ ಪಂದ್ಯದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿ, ರಂಜಿಸಿದರು.

ಆರ್ ಸಿಬಿ ಆರಂಭಿಕರಾದ ಫಿಂಚ್ 47 ರನ್ ಹಾಗೂ ಪಡಿಕ್ಕಲ್ 32 ಉತ್ತಮ ಆರಂಭ ನೀಡಿದರೆ, ನಂತರ ಕೊಹ್ಲಿ-ಎಬಿಡಿ ಜೊತೆಯಾಟದಿಂದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 194ರನ್ ಕಲೆಹಾಕಲು ಸಾಧ್ಯವಾಯಿತು.

ಎಬಿಡಿ- ಕೊಹ್ಲಿ ಜೊತೆಯಾಟದಿಂದ 3,000ರನ್ ಕಲೆ ಹಾಕಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ಕೂಡಾ ಇದೇ ಜೋಡಿ ಸಂಪಾದಿಸಿದೆ.
ಕೊಹ್ಲಿ ಒಟ್ಟು 19 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದಾರೆ.

ಟಾಪ್ 5 ಅತಿ ಹೆಚ್ಚು ಬಾರಿ ಶತಕದ ಜೊತೆಯಾಟ ಸಾಧಿಸಿದವರು:
10: ವಿರಾಟ್ ಕೊಹ್ಲಿ- ಎಬಿ ಡಿ ವಿಲಿಯರ್ಸ್
9: ವಿರಾಟ್ ಕೊಹ್ಲಿ- ಕ್ರಿಸ್ ಗೇಲ್
6: ಶಿಖರ್ ಧವನ್- ಡೇವಿಡ್ ವಾರ್ನರ್
5; ಜಾನಿ ಬೈರ್ಸ್ಟೋ-ಡೇವಿಡ್ ವಾರ್ನರ್
5: ಗೌತಮ್ ಗಂಭೀರ್- ರಾಬಿನ್ ಉತ್ತಪ್ಪ

Story first published: Tuesday, October 13, 2020, 9:56 [IST]
Other articles published on Oct 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+