For Quick Alerts
ALLOW NOTIFICATIONS  
For Daily Alerts
 

ಆಲ್ ರೌಂಡರ್ ಸುನಿಲ್ ನರೈನ್‌ ವಿರುದ್ಧ ಮತ್ತೆ ಅಕ್ರಮ ಬೌಲಿಂಗ್ ದೂರು

IPL 2020: Kolkata Knight Riders Sunil Narine reported for suspect action again

ಅಬುಧಾಬಿ: ಶನಿವಾರ (ಅಕ್ಟೋಬರ್ 10) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 24ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್‌ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ರೋಚಕ 2 ರನ್‌ಗಳ ಗೆಲುವು ದಾಖಲಿಸಿದೆ. ಆದರೆ ಕೆಕೆಆರ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ ರೌಂಡರ್ ಸುನಿಲ್ ನರೈನ್ ವಿರುದ್ಧ ಮತ್ತೆ ಅಕ್ರಮ ಬೌಲಿಂಗ್ ದೂರು ಕೇಳಿ ಬಂದಿದೆ.

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸುನಿಲ್ ನರೈನ್ ಒಟ್ಟು 4 ಓವರ್‌ಗಳನ್ನು ಎಸೆದು 28 ರನ್‌ನೀಡಿ 2 ವಿಕೆಟ್‌ಗಳನ್ನು ಉರುಳಿಸಿದ್ದರು. ನಿಕೋಲಸ್ ಪೂರನ್ ಮತ್ತು ಮನ್‌ದೀಪ್ ಸಿಂಗ್ ವಿಕೆಟ್‌ಗಳು ನರೈನ್‌ಗೆ ಲಭಿಸಿದ್ದವು.

'ಐಪಿಎಲ್ ಶಂಕೆಯ ಬೌಲಿಂಗ್ ಶೈಲಿ ನಿಯಮದ ಪ್ರಕಾರ ಸುನಿಲ್ ನರೈನ್ ಬೌಲಿಂಗ್ ಶೈಲಿಯ ಬಗ್ಗೆ ಆನ್ ಫೀಲ್ಡ್ ಅಂಪೈರ್‌ಗಳಾದ ಉಲ್ಲಾಸ್ ಗಂಧೆ ಮತ್ತು ಕ್ರಿಸ್ ಗಫಾನೆ ದೂರು ನೀಡಿದ್ದಾರೆ,' ಎಂದು ಐಪಿಎಲ್ ಸ್ಟೇಟ್‌ಮೆಂಟ್ ಹೇಳಿದೆ. ನರೈನ್ ಅವರನ್ನು ವಾರ್ನಿಂಗ್ ಲಿಸ್ಟ್‌ನಲ್ಲಿ ಸೇರಿಸಲಾಗಿದೆ ಎಂದು ಐಪಿಎಲ್ ತಿಳಿಸಿದೆ.

ನರೈನ್ ಬೌಲಿಂಗ್ ಶೈಲಿಯ ಬಗ್ಗೆ ದೂರು ನೀಡಿ ಎಚ್ಚರಿಕೆ ನೀಡಿ ಅವರನ್ನು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮುಂದುವರೆಯಲು ಬಿಡಲಾಗಿತ್ತು. ನರೈನ್ ಒಂದುವೇಳೆ ಮತ್ತೆ ಅದೇ ರೀತಿಯ ಬೌಲಿಂಗ್ ಆ್ಯಕ್ಷನ್ ಮಾಡಿದರೆ ಅವರು ಟೂರ್ನಿಯಲ್ಲಿ ಬೌಲಿಂಗ್‌ನಿಂದ ಅಮಾನತಾಗಲಿದ್ದಾರೆ. ಮತ್ತೆ ನರೈನ್ ಬೌಲಿಂಗ್ ಮಾಡಬೇಕಾದರೆ ಬಿಸಿಸಿಐನಿಂದ ಅನುಮತಿ ಲಭಿಸಬೇಕಾಗುತ್ತದೆ.

2015ರಲ್ಲಿ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದಿದ್ದ ಶ್ರೀಲಂಕಾ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯದ ವೇಳೆ ಮೊದಲ ಬಾರಿ ವಿಂಡೀಸ್ ಬೌಲರ್ ನರೈನ್ ವಿರುದ್ಧ ಅಕ್ರಮ ಬೌಲಿಂಗ್ ದೂರು ಕೇಳಿ ಬಂದಿತ್ತು. ಮತ್ತೆ 2015ರ ಐಪಿಎಲ್‌ ವೇಳೆಯೂ ಸಂಶಯಾಸ್ಪದ ಬೌಲಿಂಗ್ ಮಾಡಿದ್ದರು.

Story first published: Monday, October 12, 2020, 10:15 [IST]
Other articles published on Oct 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+