ಐಪಿಎಲ್ 2020: ಜಯದ ಹಾದಿಗೆ ಮರಳಲು ಪಂಜಾಬ್‌ಗೆ ಈ 3 ಬದಲಾವಣೆ ಅನಿವಾರ್ಯ

ಐಪಿಎಲ್ ಟೂರ್ನಿ ಈ ಬಾರಿಯ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೀಡುತ್ತಾ ಬಂದಿದೆ. ಆದರೆ ಗೆಲ್ಲುವ ಅವಕಾಶವಿದ್ದ ಕೆಲ ಪಂದ್ಯಗಳನ್ನು ಕೈಚೆಲ್ಲಿದೆ. ಕಳೆದ ಐದು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲ್ಲಲು ಸಾಧ್ಯವಾಗಿದ್ದು ಒಂದು ಪಂದ್ಯದಲ್ಲಿ ಮಾತ್ರ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸಾಕಷ್ಟು ಸ್ಟಾರ್ ಆಟಗಾರರಿದ್ದಾರೆ. ಆದರೆ ಪಂದ್ಯ ಅಂತ್ಯದ ವೇಳೆಗೆ ಸಾಕಷ್ಟು ರನ್ ಬಿಟ್ಟುಕೊಡುವ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆಗಳನ್ನು ಪಂಜಾಬ್ ತಂಡ ಅನಿವಾರ್ಯವಾಗಿ ಮಾಡಿಕೊಳ್ಳಲೇಬೇಕಿದೆ. ಈ ಮೂಲಕ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನವನ್ನು ನಡೆಸಬೇಕಿದೆ.
ಹಾಗಾದರೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ತಂಡದಲ್ಲಿ ಮಾಡಿಕೊಳ್ಳಬೇಕಾದ ಆ ಬದಲಾವಣೆಗಳು ಯಾವುದು ಮುಂದೆ ಓದಿ

ಕ್ರಿಸ್ ಜೋರ್ಡನ್ ಬದಲಿಗೆ ಇಶಾನ್ ಪೋರೆಲ್
ಐಪಿಎಲ್ 2020 ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೇಗಿಗಳಾದ ಮೊಹಮದ್ ಶಮಿ ಹಾಗೂ ಶೆಲ್ಡನ್ ಕಾಟ್ರೆಲ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಐದು ಪಂದ್ಯಗಳಲ್ಲಿ ಇಬ್ಬರು ಸೇರಿ 14 ವಿಕೆಟ್ ಕಬಳಿಸಿದ್ದಾರೆ. ಆದರೆ ಮೂರನೇ ವೇಗಿಯಾಗಿರುವ ಜೋರ್ಡನ್ ಪ್ರದರ್ಶನ ನೀರಸವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲೂ ವಿಫಲರಾದ ಜೋರ್ಡನ್ 14ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ಹೀಗಾಗಿ ಭಾರತದ ಅನ್‌ಕ್ಯಾಪ್‌ಡ್ ಆಟಗಾರ ಇಶಾನ್ ಪೋರೆಲ್‌ಗೆ ಮುಂದಿನ ಪಂದ್ಯದಲ್ಲಿ ಅವಕಾಶ ನೀಡುವುದು ಉತ್ತಮ ನಿರ್ಧಾರವಾಗಲಿದೆ. 14 ಟಿ20 ಪಂದ್ಯಗಳನ್ನಾಡಿರುವ ಪೋರೆಲ್ 6.11ರ ಎಕಾನಮಿ ರೇಟ್‌ನಲ್ಲಿ 16 ವಿಕೆಟ್ ಪಡೆದಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಸ್ಥಾನಕ್ಕೆ ಕ್ರಿಸ್ ಗೇಲ್
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಕಳೆದ ಐದು ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದಿದ್ದು ಕೇವಲ 41 ರನ್ ಮಾತ್ರ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕ್ರಿಸ್‌ಗೇಲ್‌ಗೆ ಅವಕಾಶ ನೀಡಿದರೆ ತಂಡದ ಬ್ಯಾಟಿಂಗ್ ಪಡೆಗೆ ಬಲ ಸಿಗಲಿದೆ.

ಹರ್‌ಪ್ರೀತ್ ಬ್ರಾರ್ ಸ್ಥಾನಕ್ಕೆ ಮುಜೀಬ್ ಉರ್ ರಹ್ಮಾನ್
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಹರ್‌ಪ್ರೀತ್ ಬ್ರಾರ್ ಆಡುವ ಅವಕಾಶವನ್ನು ಪಡೆದುಕೊಂಡರು. ಆದರೆ ಹರ್‌ಪ್ರೀತ್ ಪ್ರದರ್ಶನ ನೀರಸವಾಗಿತ್ತು. ನಾಲ್ಕು ಓವರ್‌ಗಳಲ್ಲಿ 41 ರನ್ ಬಿಟ್ಟಕೊಟ್ಟು ದುಬಾರಿಎನಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ವಿಶ್ವದರ್ಜೆಯ ಬೌಲರ್ ಮುಜೀಬ್ ಉರ್ ರಹ್ಮಾನ್ ಇರುವ ಕಾರಣ ಈ ಆಯ್ಕೆಯನ್ನು ಬಳಸಿಕೊಳ್ಳಲೇ ಬೇಕಿದೆ. 122 ಟಿ20 ಪಂದ್ಯಗಳನ್ನು ಆಡಿರುವ ಮುಜೀಬ್ 6.60 ಎಕಾನಮಿಯಲ್ಲಿ 131 ವಿಕೆಟ್ ಪಡೆದಿದ್ದಾರೆ. ಪವರ್‌ಪ್ಲೇನಲ್ಲಿ ಆರ್‌ಸಿಬಿ ವಾಶಿಂಗ್ಟನ್ ಸುಂದರ್ ಅವರನ್ನು ಬಳಸಿಕೊಂಡಂತೆಯೇ ಮುಜೀಬ್ ಉರ್ ರಹ್ಮಾನ್ ಅವರನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲು ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications