ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಪಂಜಾಬ್

ಸತತ ಸೋಲುಗಳನ್ನು ಕಂಡು ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಳೆಯದಲ್ಲಿ ಈಗ ಸತತ ಗೆಲುವುಗಳ ಸಂತಸ ಮನೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐದು ವಿಕೆಟ್‌ಗಳ ಗೆಲುವನ್ನು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ನಾಲ್ಕನೇ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಿಖರ್ ಧವನ್ ಭರ್ಜರಿ ಶತಕ ಆಸರೆಯಾಯಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 164 ರನ್‌ಗಳಿಸಲು ಶಕ್ತವಾಗಿತ್ತು. ಡೆಲ್ಲಿ ತಂಡದಲ್ಲಿ ಶಿಖರ್ ಧವನ್ ಹೊರತು ಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಬರಲೇ ಇಲ್ಲ.
ಪಂಜಾಬ್ ತಂಡದ ಪರವಾಗಿ ಶಮಿ ಹಾಗೂ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಮಿಂಚಿದರು. ಶಮಿ ಎರಡು ವಿಕೆಟ್ ಪಡೆದರೆ ಮ್ಯಾಕ್ಸವೆಲ್, ನೀಶಮ್ ಹಾಗೂ ಎಂ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ 165 ರನ್‌ಗಳ ಗುರಿಯನ್ನು ಪಂಜಾಬ್ ಮುಂದಿಟ್ಟಿತ್ತು ಡೆಲ್ಲಿ.
ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಎಂದಿನ ಆರಮಭಿಕ ಜತೆಯಾಟ ದೊರೆಯಲಿಲ್ಲ. ಕೆಎಲ್ ರಾಹುಲ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಬಳಿಕ ಮಯಾಂಕ್ ಅಗರ್ವಾಲ್ ಕೂಡ 5 ರನ್‌ಗೆ ಔಟಾಗಿ ಫೆವಿಲಿಯನ್ ಸೇರಿಕೊಂಡರು. ನಂತರ ಕ್ರಿಸ್ ಗೇಲ್ 13 ಎಸೆತಗಳಲ್ಲಿ 2 ಸಿಕ್ಸರ್ 3 ಬೌಂಡರಿಯೊಂದಿಗೆ 29 ರನ್‌ಗಳಿಸಿ ಮಿಂಚಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಇಂದು ಉತ್ತಮ ಆಟದ ಮೂಲಕ ಗೆಲುವಿಗೆ ಕಾರಣರಾಗಿದ್ದು ನಿಕೋಲಸ್ ಪೂರನ್. 28 ಎಸೆತಗಳನ್ನು ಎದುರಿಸಿದ ಪೂರನ್ 53 ರನ್ ಗಳಿಸಿ ಗೆಲುವನ್ನು ಸುಲಭವಾಗಿಸಿದರು. ಮ್ಯಾಕ್ಸ್‌ವೆಲ್ 32 ರನ್‌ಗಳಿಸಿ ತಂಡಕ್ಕೆ ನೆರವಾದರು. ದೀಪಕ್ ಕೂಡ ಹಾಗೂ ನೀಶಮ್ ಅಂತಿಮವಾಗಿ ಗೆಲುವನ್ನು ಸಾರಿದರು. ಈ ಮೂಲಕ ಪಂಜಾಬ್ ಇನ್ನೂ ಒಂದು ಓವರ್‌ಗಳು ಉಳಿದಿರುವಂತೆಯೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications