Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್‌ ಬ್ಯಾಟ್ಸ್‌ಮನ್ ಮನ್‌ದೀಪ್‌ ಸಿಂಗ್ ವಿಶೇಷ ಮೈಲಿಗಲ್ಲು

IPL 2020: KXIP vs KKR: Mandeep Singh is all set to play his 100th IPL Match

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್‌ನ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಶನಿವಾರ (ಅಕ್ಟೋಬರ್ 10) ನಡೆದ ಐಪಿಎಲ್ 24ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೈದಾನಕ್ಕಿಳಿದಿದ್ದ ಮನ್‌ದೀಪ್ ಐಪಿಎಲ್‌ನಲ್ಲಿ 100ನೇ ಪಂದ್ಯ ಆಡಿದ ಆಟಗಾರನಾಗಿ ಗಮನ ಸೆಳೆದಿದ್ದಾರೆ.

ಯಾಕೆ ಮನ್‌ದೀಪ್ ಸಿಂಗ್ ಅವರ ಈ ಸಾಧನೆ ಗಮನಾರ್ಹವೆಂದರೆ ಐಪಿಎಲ್‌ನಲ್ಲಿ 100 ಪಂದ್ಯಗಳನ್ನಾಡಿದ ದಾಖಲೆ ಹೆಚ್ಚು ಆಟಗಾರರ ಹೆಸರಿನಲ್ಲಿಲ್ಲ. ಇಲ್ಲೀವರೆಗೆ 38 ಆಟಗಾರರಷ್ಟೇ ಈ ದಾಖಲೆ ಪಟ್ಟಿ ಸೇರಿದ್ದರು. ಈಗ ಮನ್‌ದೀಪ್ 39ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು. ಹೀಗಾಗಿ ಮನ್‌ದೀಪ್ ಮೈದಾನಕ್ಕಿಳಿಯುತ್ತಲೇ ಅವರ ಹೆಸರಿನಲ್ಲಿ ಈ ದಾಖಲೆ ಸೃಷ್ಠಿಯಾಗಿದೆ. ಐಪಿಎಲ್‌ನಲ್ಲಿ ಸಿಂಗ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಪರವಾಗಿಯೂ ಆಡಿದ್ದಾರೆ.

ಐಪಿಎಲ್‌ನಲ್ಲಿ 100 ಪಂದ್ಯಗಳಲ್ಲಿ 86 ಇನ್ನಿಂಗ್ಸ್‌ಗಳನ್ನಾಡಿರುವ ಬಲಗೈ ಬ್ಯಾಟ್ಸ್‌ಮನ್ ಮನ್‌ದೀಪ್ 1562* ರನ್ ಗಳಿಸಿದ್ದಾರೆ. ಸಿಂಗ್ ಅತ್ಯಧಿಕ ವೈಯಕ್ತಿಕ ರನ್ ಅಂದರೆ 77. 5 ಅರ್ಧ ಶತಕ, 160 ಫೋರ್ಸ್, 35 ಸಿಕ್ಸರ್ ಕೂಡ ಬಾರಿಸಿದ್ದಾರೆ. 3 ಟಿ20ಐ ಪಂದ್ಯಗಳಲ್ಲಿ 87 ರನ್ ಗಳಿಸಿದ್ದಾರೆ.

Story first published: Saturday, October 10, 2020, 17:15 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+