ಐಪಿಎಲ್: ಪಂಜಾಬ್ vs ಕೋಲ್ಕತ್ತಾ, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

ಅಬುಧಾಬಿ: ಈವರೆಗೆ ಅಡಿದ 6 ಪಂದ್ಯಗಳಲ್ಲಿ ಕೇವಲ ಒಂದೇ ಗೆಲುವು ಕಂಡಿರುವ, ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ XI ಪಂಜಾಬ್ ತಂಡ, ಅಕ್ಟೋಬರ್ 10ರ ಶನಿವಾರ ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿಯ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆಯುತ್ತಿರುವ 24ನೇ ಪಂದ್ಯವಿದು.
ಆಡಿರುವ 5 ಪಂದ್ಯಗಳಲ್ಲಿ 3 ಜಯ ದಾಖಲಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಈಗಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವುದರಿಂದ ಪಂಜಾಬ್‌ಗೆ ಇಂದಿನ ಗೆಲುವು ಬಹುಮುಖ್ಯವಾಗಿದೆ.
ಅಕ್ಟೋಬರ್ 10ರ ಶನಿವಾರವಾದ ಈ ದಿನ ಎರಡೆರಡು ಪಂದ್ಯಗಳು ಇರಲಿವೆ. ಕೋಲ್ಕತ್ತಾ vs ಪಂಜಾಬ್ ಪಂದ್ಯ 3.30 pmಗೆ ನಡೆಯಲಿದೆ.

ಅಬುಧಾಬಿ ತಾಪಮಾನ
ಕೋಲ್ಕತ್ತಾ ನೈಟ್ ರೈಡರ್ಸ್-ಕಿಂಗ್ಸ್ XI ಪಂಜಾಬ್ ಪಂದ್ಯ ನಡೆಯುವ ಶನಿವಾರ ಅಬುಧಾಬಿಯ ತಾಪಮಾನ 34 ಡಿಗ್ರೀ ಸೆಲ್ಶಿಯಸ್ ಇರಲಿದೆ. ಈ ದಿನ ತೀವ್ರವಾದ ಶೆಖೆ ಆಟಗಾರರನ್ನು ಕಾಡಲಿದೆ. ದ್ವಿತೀಯ ಇನ್ನಿಂಗ್ಸ್ ಆಡುವ ತಂಡಕ್ಕೆ ಕೊಂಚ ಶೆಖೆಯಿಂದ ಪಾರಾಗಬಹುದಾಗಿದೆ.

ಪಿಚ್ ರಿಪೋರ್ಟ್
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಅನ್ನು ಬ್ಯಾಟಿಂಗ್ ಅಥವಾ ಬೌಲಿಂಗ್ ಅಂತ ಹೇಳುವಂತಿಲ್ಲ. ಯಾಕೆಂದರೆ ಈ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಚೆನ್ನಾಗಿದೆ. ಇದು ದೊಡ್ಡ ಗ್ರೌಂಡ್ ಆಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ನೋಡಿ ಆಡಬೇಕಾಗಿರುತ್ತದೆ.

ಪಂಜಾಬ್ ಸಂಭಾವ್ಯ ತಂಡ
ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ಸಿ), ನಿಕೋಲಸ್ ಪೂರನ್ (ವಿಕೆ), ಪ್ರಭ್‌ಸಿಮ್ರನ್ ಸಿಂಗ್/ಸರ್ಫ್ರಾಜ್ ಖಾನ್, ಮಂದೀಪ್ ಸಿಂಗ್, ಮುಜೀಬ್ ಉರ್ ರಹಮಾನ್, ಅರ್ಷ್‌ದೀಪ್ ಸಿಂಗ್ /ಎಂ ಅಶ್ವಿನ್, ರವಿ ಬಿಷ್ಣೋಯ್, ಶೆಲ್ಡನ್ ಕಾಟ್ರೆಲ್, ಮೊಹಮ್ಮದ್ ಶಮಿ.

ಕೋಲ್ಕತ್ತಾ ಸಂಭಾವ್ಯ ತಂಡ
ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ (ಸಿ, ಡಬ್ಲ್ಯೂಕೆ), ಆ್ಯಡ್ರೆ ರಸ್ಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಗರ್ಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications