Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕಿಂಗ್ಸ್‌ XI ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯಭೇರಿ

IPL 2020: KXIP vs MI, Match 13 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 1) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 48 ರನ್ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 70 (45 ಎಸೆತ), ಸೂರ್ಯಕುಮಾರ್ ಯಾದವ್ 10, ಇಶಾನ್ ಕಿಶನ್ 28, ಕೀರನ್ ಪೊಲಾರ್ಡ್ 47 (20 ಎಸೆತ), ಹಾರ್ದಿಕ್ ಪಾಂಡ್ಯ 30 (11 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 191 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಕೆಎಲ್ ರಾಹುಲ್ 17, ಮಯಾಂಕ್ ಅಗರ್ವಾಲ್ 25, ನಿಕೋಲಸ್ ಪೂರನ್ 44 (27 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ 11, ಕೃಷ್ಣಪ್ಪ ಗೌತಮ್ 22 ರನ್ ಬಾರಿಸಿದರು. ಕೆXIಪಿ 20 ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟದಲ್ಲಿ 143 ರನ್ ಬಾರಿಸಿ ತಲೆ ಬಾಗಿತು.

ಮುಂಬೈ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಶೆಲ್ಡನ್ ಕಾಟ್ರೆಲ್, ಮೊಹಮ್ಮದ್ ಶಮಿ ಮತ್ತು ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ಎಂಐಯ ಟ್ರೆಂಟ್ ಬೌಲ್ಟ್ 1, ಜೇಮ್ಸ್ ಪ್ಯಾಟಿನ್ಸನ್ 2, ಕೃನಾಲ್ ಪಾಂಡ್ಯ 1, ಜಸ್‌ಪ್ರೀತ್ ಬೂಮ್ರಾ 2, ರಾಹುಲ್ ಚಾಹರ್ 2 ವಿಕೆಟ್‌ನಿಂದ ಗಮನ ಸೆಳೆದರು.

Story first published: Thursday, October 1, 2020, 23:43 [IST]
Other articles published on Oct 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+