ಐಪಿಎಲ್ 2020: ಮತ್ತೊಂದು ಸೂಪರ್ ಓವರ್ ಪಂದ್ಯ: ಪಂಜಾಬ್‌ಗೆ ಗೆಲುವು

ಭಾನುವಾರದ ಎರಡನೇ ಪಂದ್ಯವೂ ಸೂಪರ್ ಓವರ್‌ನಲ್ಲಿ ಅಂತ್ಯವಾಗುವ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಠಿಯಾಗಿದೆ. ಮುಂಬೈ ಹಾಗೂ ಪಂಜಾಬ್ ವಿರುದ್ಧ ನಡೆದ ಹಣಾಹಣ ರೋಚಕ ಟೈ ಮೂಲಕ ಅಂತ್ಯವಾಗಿದ್ದು ಸೂಪರ್ ಓವರ್‌ನಲ್ಲೂ ಟೈ ಕಂಡು ಮತ್ತೊಂದು ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರವಾಗಿದೆ.
ಈ ರೋಚಕ ಕಾದಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ಬ್ಯಾಟಿಂಗ್ ಮೆರುಗು ನೀಡಿದರೆ ಸೂಪರ್ ಓವರ್‌ನಲ್ಲಿ ಶಮಿ, ಬೂಮ್ರಾ ಬೌಲಿಂಗ್‌ನಲ್ಲಿ ಮಿಂಚಿದರೆ ಕೆಎಲ್ ರಾಹುಲ್ ಅದ್ಭುತ ರನ್‌ಔಟ್‌ಗೆ ಕಾರಣರಾದರು. ಇನ್ನೊಂದು ಸೂಪರ್ ಓವರ್‌ನಲ್ಲಿ ಮಯಾಂಕ್ ಅಸಾಧಾರಣ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಹೀರೋ ಎನಿಸಿದರು.

ರಾಹುಲ್ ಮತ್ತೊಂದು ಅದ್ಭುತ ಇನ್ನಿಂಗ್ಸ್
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿ 20 ಓವರ್‌ಗಳಲ್ಲಿ 176 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕೆಎಲ್ ರಾಹುಲ್ ಮತ್ತೊಂದು ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ 176 ರನ್ ಗಳಿಸಲು ಶಕ್ತವಾಯಿತು. ಈ ಮೂಲಕ ಈ ಭಾನುವಾರದ ಎರಡನೇ ಪಂದ್ಯವೂ ಟೈ ಫಲಿತಾಂಶವನ್ನು ಕಂಡಿತು.

ಸೂಪರ್ ಓವರ್ ಟೈ!
ಪಂದ್ಯ ಟೈ ಆದ ಕಾರಣ ಸೂಪರ್ ಓವರ್‌ನಲ್ಲಿ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ನಡೆಸಿತು. ಇದರಲ್ಲಿ ಜಸ್ಪ್ರೀತ್ ಬೂಮ್ರಾ ಎಸೆದ ಓವರ್‌ನಲ್ಲಿ ಕೇವಲ ಐದು ರನ್ ಗಳಿಸಲಷ್ಟೇ ಕಿಂಗ್ಸ್ ಇಲೆವೆನ್ ಪಂಜಾಬ್ ಶಕ್ತವಾಯಿತು. ಇದನ್ನು ಬೆನ್ನಟ್ಟಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಕೂಡ ಐದು ರನ್‌ಗಳನ್ನಷ್ಟೇ ಮಾಡಲು ಸಾಧ್ಯವಾಯಿತು. ಈ ಮೂಲಕ ಸೂಪರ್ ಓವರ್ ಕೂಡ ಟೈನಲ್ಲಿ ಅಂತ್ಯವಾಯಿತು.

ಎರಡನೇ ಸೂಪರ್ ಓವರ್
ಹೀಗಾಗಿ ನಿಯಮದ ಪ್ರಕಾರ ಎರಡನೇ ಸೂಪರ್ ಓವರ್‌ನಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ತೀರ್ಮಾನಿಸಲಾಯಿತು. ಮೊದಲಿಗೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ಗೆ ಇಳಿಯಿತು. ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಡೆಸಿದರೆ ಕ್ರಿಸ್ ಜೋರ್ಡನ್ ಬೌಲಿಂಗ್‌ನಲ್ಲಿ ಕಣಕ್ಕಿಳಿದಿದ್ದರು.

ರೋಚಕ ಜಯ ಸಾಧಿಸಿದ ಪಂಜಾಬ್
ಮುಂಬೈ ಇಂಡಿಯನ್ಸ್ ಈ ಸೂಪರ್ ಓವರ್‌ನಲ್ಲಿ 11 ರನ್ ಗಳಿಸಲು ಯಶಸ್ವಿಯಾಯಿತು. ಅಂತಿಮ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅದ್ಭುತ ಫೀಲ್ಡಿಂಗ್‌ನಿಂದ ಸಿಕ್ಸರ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಸೂಪರ್ ಓವರ್‌ನಲ್ಲಿ ಮುಂಬೈ ನೀಡಿದ 12 ರನ್‌ಗಳ ಗುರಿಯನ್ನು ಬೆನ್ನಟ್ಟಲು ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ ಕಣಕ್ಕಿಳಿದಿದ್ದರು. ಬೋಲ್ಟ್ ಎಸೆದ ಮೊದಲ ಎಸೆತದಲ್ಲೇ ಗೇಲ್ ಸಿಕ್ಸರ್ ಸಿಡಿಸಿದರೆ ಬಳಿಕ ಒಂಟಿ ರನ್‌ನ ನಂತರ ಮಯಾಂಕ್ ಅಗರ್ವಾಲ್ ಎರಡು ಬೌಂಡರಿ ಬಾರಿಸಿ ಪಂಜಾಬ್‌ಗೆ ರೋಚಕ ಗೆಲುವನ್ನು ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications