ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಸ್ಫೋಟಕ ಶತಕ, ಬೆಂಗಳೂರು ವಿರುದ್ಧ ಪಂಜಾಬ್‌ಗೆ ಜಯ

IPL 2020: KXIP vs RCB Match 6 highlights in kannada

ದುಬೈ: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 24) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಭರ್ಜರಿ 97 ರನ್ ಜಯ ದಾಖಲಿಸಿದೆ. ಕೆಎಲ್ ರಾಹುಲ್ ಅವರ ಸ್ಫೋಟಕ ಶತಕದ ನೆರವಿನೊಂದಿಗೆ ಕೆXIಪಿ ಟೂರ್ನಿಯ ಮೊದಲ ಜಯ ಗಳಿಸಿದೆ.

ಟಿ 20ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದವರ ಕ್ಲಬಿಗೆ ಎಬಿ ಡಿ ವಿಲಿಯರ್ಸ್ ಎಂಟ್ರಿಟಿ 20ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದವರ ಕ್ಲಬಿಗೆ ಎಬಿ ಡಿ ವಿಲಿಯರ್ಸ್ ಎಂಟ್ರಿ

ಕಿಂಗ್ಸ್ ಇಲೆವೆನ್ ಪಂಜಾಬ್‌ನ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಕೆಎಲ್ ರಾಹುಲ್ ರನ್ ಬಲ ತುಂಬಿದರೆ, ಬೌಲಿಂಗ್‌ ವಿಭಾಗದಲ್ಲಿ ರವಿ ಬಿಶ್ನೋಯ್, ಮುರುಗನ್ ಅಶ್ವಿನ್ ಮತ್ತು ಶೆಲ್ಡನ್ ಕಾಟ್ರೆಲ್ ತಂಡದ ಗೆಲುವಿಗೆ ಕಾರಣರಾದರು. ಮುಖ್ಯವಾಗಿ ರಾಹುಲ್ ಅವರ ಆಟ ತಂಡಕ್ಕೆ ಗೆಲುವಿನುಡುಗೊರೆ ನೀಡಿದೆ.

ಐಪಿಎಲ್: ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಕನ್ನಡಿಗ ಕೆಎಲ್ ರಾಹುಲ್ಐಪಿಎಲ್: ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಕನ್ನಡಿಗ ಕೆಎಲ್ ರಾಹುಲ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ಕೆಎಲ್ ರಾಹುಲ್ ಅಜೇಯ 132 (69 ಎಸೆತ), ಮಯಾಂಕ್ ಅಗರ್ವಾಲ್ 26, ನಿಕೋಲಸ್ ಪೂರನ್ 17, ಕರುಣ್ ನಾಯರ್ ಅಜೇಯ 15 ರನ್ ಸೇರಿಸಿದರು. ಕೆXIಪಿ 20 ಓವರ್‌ಗೆ 3 ವಿಕೆಟ್ ಕಳೆದು 206 ರನ್ ಗಳಿಸಿತು.

ಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿ

ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದು ಆಘಾತ ಅನುಭವಿಸಿತು. ವಿರಾಟ್ ಕೊಹ್ಲಿ 1, ದೇವದತ್ ಪಡಿಕ್ಕಲ್ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಆ್ಯರನ್ ಫಿಂಚ್ 20, ಎಬಿ ಡಿ ವಿಲಿಯರ್ಸ್ 28, ವಾಷಿಂಗ್ಟನ್ ಸುಂದರ್ 30, ಶಿವಂ ದೂಬೆ 12 ರನ್‌ನೊಂದಿಗೆ 17 ಓವರ್‌ಗೆ ಎಲ್ಲಾ ವಿಕೆಟ್ ಕಳೆದು ಆರ್‌ಸಿಬಿ 109 ರನ್ ಗಳಿಸಿ ಸೋಲನುಭವಿಸಿತು.

ಐಪಿಎಲ್: ಆರ್‌ಸಿಬಿ ಬೆನ್ನು ಹತ್ತಿದೆ ಅತಿ ಹೆಚ್ಚು ''ಕ್ಯಾಚ್ ಡ್ರಾಪ್'' ದಾಖಲೆಐಪಿಎಲ್: ಆರ್‌ಸಿಬಿ ಬೆನ್ನು ಹತ್ತಿದೆ ಅತಿ ಹೆಚ್ಚು ''ಕ್ಯಾಚ್ ಡ್ರಾಪ್'' ದಾಖಲೆ

ಕಿಂಗ್ಸ್‌ ಇಲೆವೆನ್ ಪಂಜಾಬ್‌ ಇನ್ನಿಂಗ್ಸ್‌ನಲ್ಲಿ ಬೆಂಗಳೂರಿನ ಶಿವಂ ದೂಬೆ 2, ಯುಜುವೇಂದ್ರ ಚಾಹಲ್ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ರವಿ ಬಿಷ್ಣೋಯ್ 3, ಮುರುಗನ್ ಅಶ್ವಿನ್ 3, ಶೆಲ್ಡನ್ ಕಾಟ್ರೆಲ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಕೆಎಲ್ ರಾಹುಲ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, September 25, 2020, 9:48 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X