Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆನ್ ಸ್ಟೋಕ್ಸ್ ಒಬ್ಬ ಕ್ಲಾಸ್ ಪ್ಲೇಯರ್: ಆರ್‌ಆರ್‌‌‌ ನಾಯಕ ಸ್ಟೀವ್ ಸ್ಮಿತ್

IPL 2020: KXIP vs RR: Ben Stokes is a class player, says RR captain Steve Smith

ದುಬೈ: ಬೆನ್ ಸ್ಟೋಕ್ಸ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ 50ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ. ತಂಡದ ಗೆಲುವಿಗೆ ಕಾರಣವಾಗಿರುವ ಆಲ್ ರೌಂಡರ್ ಸ್ಟೋಕ್ಸ್ ಅವರನ್ನು ನಾಯಕ ಸ್ಟೀವ್ ಸ್ಮಿತ್ ಶ್ಲಾಘಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ 11 ಪಂಜಾಬ್ ಪರ ಕೆಎಲ್ ರಾಹುಲ್ 46, ನಿಕೋಲಸ್ ಪೂರನ್ 22, ಕ್ರಿಸ್ ಗೇಲ್ 99 (63 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ 6, ದೀಪಕ್ ಹೂಡಾ 1 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 185 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್‌ನಿಂದ ಸಂಜು ಸ್ಯಾಮ್ಸನ್ 48 (25 ಎಸೆತ), ರಾಬಿನ್ ಉತ್ತಪ್ಪ 30, ಬೆನ್ ಸ್ಟೋಕ್ಸ್ 50 (26 ಎಸೆತ), ಸ್ಟೀವ್ ಸ್ಮಿತ್ 31, ಜೋಸ್ ಬಟ್ಲರ್ 22 ರನ್‌ನೊಂದಿಗೆ 17.3ನೇ ಓವರ್‌ಗೆ 3 ವಿಕೆಟ್ ಕಳೆದು 186 ರನ್ ಬಾರಿಸಿ ಗೆಲುವಿನ ನಗು ಬೀರಿತ್ತು. ಅದ್ಭುತ ಆಟ ನೀಡಿದ್ದಕ್ಕಾಗಿ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.

'ಆತ ಎದುರಾಳಿ ಬೌಲರ್‌ಗಳಿಗೆ ಚೆನ್ನಾಗಿ ಹೊಡೀತಾರೆ. ಇದು ಒಳ್ಳೆಯ ಲಕ್ಷಣ. ಬೆನ್ ಒಬ್ಬ ಕ್ಲಾಸ್ ಪ್ಲೇಯರ್. ಸರಿಯಾದ ಹೊಡೆತಗಳನ್ನು ಹೊಡೆಯುತ್ತಾರೆ. ರನ್ ಬೇಕಾದ ಜಾಗದಲ್ಲೇ ಚೆಂಡು ಹೊಡೆಯುತ್ತಾರೆ. ಆತ ವಿಶ್ವದಲ್ಲಿ ಬೆಸ್ಟ್ ಆಟಗಾರರಲ್ಲೊಬ್ಬ,' ಎಂದು ಪಂದ್ಯದ ಬಳಿಕ ಸ್ಮಿತ್ ಹೇಳಿದ್ದಾರೆ.

Story first published: Saturday, October 31, 2020, 11:11 [IST]
Other articles published on Oct 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+