For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಎಲ್ಲೆ ಮೀರಿ ವರ್ತಿಸಿದ 'ಯೂನಿವರ್ಸ್ ಬಾಸ್‌'ಗೆ ದಂಡ

IPL 2020: KXIP vs RR: Chris Gayle fined for Code of Conduct breach

ಅಬುಧಾಬಿ: ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 30) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

6 ಫೋರ್ಸ್, 8 ಸಿಕ್ಸರ್ ಚಚ್ಚಿ 99 ರನ್ ಬಾರಿಸಿ ಶತಕದ ಸಮೀಪದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, 19.4ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಎಸೆತಕ್ಕೆ ಬೌಲ್ಡ್ ಆದರು. ಶತಕದ ಸಮೀಪದಲ್ಲಿ ಔಟಾಗಿದ್ದಕ್ಕೆ ಹತಾಶೆಗೊಂಡ ಗೇಲ್, ಬ್ಯಾಟನ್ನು ನೆಲಕ್ಕೆ ಬಡಿದು ಬೇಸರ ತೋರಿಕೊಂಡಿದ್ದರು.

ಗೇಲ್ ಈ ವರ್ತನೆ ಐಪಿಎಲ್ ನೀತಿ ಉಲ್ಲಂಘಿಸಿದಂತಾಗಿದೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ. 'ಗೇಲ್ ಅವರು ಐಪಿಎಲ್‌ನ ಕೋಡ್ ಆಫ್ ಕಂಡಕ್ಟ್ ಅನ್ನು ಮೀರಿದ್ದಾರೆ. ದಂಡವನ್ನು ಒಪ್ಪಿಕೊಂಡಿದ್ದಾರೆ. ನಿಯಮದ ಮಟ್ಟ 1ನ್ನು ಕ್ರಿಸ್ ಮೀರಿದ್ದಾರೆ. ನಿಯಮ 1ರ ಪ್ರಕಾರ ಅಂಪೈರ್ ತೀರ್ಮಾನವೇ ಅಂತಿಮ ಮತ್ತು ಅದಕ್ಕೆ ಬದ್ಧರಾಗಿರಬೇಕು,' ಎಂದು ಐಪಿಎಲ್ ಹೇಳಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ 11 ಪಂಜಾಬ್, ನಾಯಕ ಕೆಎಲ್ ರಾಹುಲ್ 46, ಕ್ರಿಸ್ ಗೇಲ್ 99, ನಿಕೋಲಸ್ ಪೂರನ್ 22, ಗ್ಲೆನ್ ಮ್ಯಾಕ್ಸ್‌ವೆಲ್ 6 ರನ್‌ನೊಂದಿಗೆ 20 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದು 185 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ರಾಬಿನ್ ಉತ್ತಪ್ಪ 30, ಬೆನ್ ಸ್ಟೋಕ್ಸ್ 50, ಸಂಜು ಸ್ಯಾಮ್ಸನ್ 48, ಸ್ಟೀವ್ ಸ್ಮಿತ್ 31, ಜೋಸ್ ಬಟ್ಲರ್ 22 ರನ್‌ ಸೇರ್ಪಡೆಯೊಂದಿಗೆ 17.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 186 ರನ್ ಬಾರಿಸಿ ಗೆಲುವನ್ನಾಚರಿಸಿತು. ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Saturday, October 31, 2020, 11:11 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+