ಐಪಿಎಲ್ 2020: ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಕಿಂಗ್ಸ್ XI ಪಂಜಾಬ್

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್ ಗೆಲುವಿನೊಂದಿಗೆ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದೆ. ಈವರೆಗಿನ ಪಂದ್ಯಗಳಲ್ಲಿ ಅತೀ ಹೆಚ್ಚಿನ ಟೋಟಲ್ ಅನ್ನು ಚೇಸಿಂಗ್ ಮೂಲಕ ತಲುಪಿ ಪಂದ್ಯ ಗೆದ್ದ ದಾಖಲೆಗೆ ಪಂಜಾಬ್ ಕಾರಣವಾಗಿದೆ.
ಬ್ಯಾಟಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಬಳಗ, ಆ್ಯರನ್ ಫಿಂಚ್ 20, ದೇವದತ್ ಪಡಿಕ್ಕಲ್ 18, ಕೊಹ್ಲಿ 48, ವಾಷಿಂಗ್ಟನ್ 13, ಶಿವಂ ದೂಬೆ 23, ಕ್ರಿಸ್ ಮೋರಿಸ್ 25 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿ ಎದುರಾಳಿಗೆ 172 ರನ್ ಗುರಿ ನೀಡಿತ್ತು.
ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಕ್ರಿಸ್ ಗೇಲ್ 53 (45 ಎಸೆತ), ಕೆಎಲ್ ರಾಹುಲ್ 61 (49), ಮಯಾಂಕ್ ಅಗರ್ವಾಲ್ 45, ನಿಕೋಲಸ್ ಪೂರನ್ 6 ರನ್‌ನೊಂದಿಗೆ 20 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 177 ರನ್ ಬಾರಿಸಿ ವಿಜಯದ ನಗೆ ಬೀರಿತು. ಇದರೊಂದಿಗೆ ಈ ಐಪಿಎಲ್‌ನಲ್ಲಿ ಮೂರನೇ ದೊಡ್ಡ ಮೊತ್ತ ಚೇಸ್ ಮಾಡಿದ ತಂಡವಾಗಿ ಪಂಜಾಬ್ ಗುರುತಿಸಿಕೊಂಡಿದೆ.
ಈ ಐಪಿಎಲ್‌ನಲ್ಲಿ ದೊಡ್ಡ ಟೋಟಲ್ ಚೇಸ್ ಮಾಡಿದ ದಾಖಲೆಗಳು
* 224 ರಾಜಸ್ಥಾನ್ ರಾಯಲ್ಸ್ vs ಕಿಂಗ್ಸ್ XI ಪಂಜಾಬ್, ಶಾರ್ಜಾ
* 179 ಚೆನ್ನೈ ಸೂಪರ್ ಕಿಂಗ್ಸ್ vs ಕಿಂಗ್ಸ್ XI ಪಂಜಾಬ್, ದುಬೈ
* 172 ಕಿಂಗ್ಸ್ XI ಪಂಜಾಬ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶಾರ್ಜಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications