Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ಹೆಚ್ಚು ಸೋತಿದ್ದು ಯಾವ ತಂಡದ ವಿರುದ್ಧ ಗೊತ್ತಾ?!

IPL 2020: List of Teams to beat Mumbai Indians (most times)

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಅತೀ ಬಲಿಷ್ಠ ತಂಡ ಎನ್ನುವುದರಲ್ಲಿ ಅನುಮಾನವಿಲ್ಲ. ಎಂಐ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗ ತುಂಬಾ ಚೆನ್ನಾಗಿದೆ. ಅಪಾಯಕಾರಿ ಆಟಗಾರರು ಅದರಲ್ಲಿ ಹೆಚ್ಚಿದ್ದಾರೆ. ಇದೇ ಕಾರಣಕ್ಕೆ ಮುಂಬೈ 4 ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ.

2013, 2015, 2017 ಮತ್ತು 2019ರಲ್ಲಿ ಐಪಿಎಲ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿರುವ ಮುಂಬೈ ಇಂಡಿಯನ್ಸ್, ಐಪಿಎಲ್‌ನ ಬೇರೆ ಬೇರೆ ತಂಡಗಳ ವಿರುದ್ಧ ಹೆಚ್ಚು ಬಾರಿ ಸೋತ ದಾಖಲೆಗಳೂ ಇದೆ. ಎಂಐ ಅನ್ನು ಹೆಚ್ಚು ಬಾರಿ ಸೋಲಿಸಿದ ದಾಖಲೆ ಐಪಿಎಲ್‌ನ ಕೆಲವು ತಂಡಗಳ ಹೆಸರಿನಲ್ಲಿದೆ.

ಐಪಿಎಲ್ ಇತಿಹಾಸದ ಪಂದ್ಯಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ಹೆಚ್ಚು ಬಾರಿ ಸೋತಿದ್ದು ಕಿಂಗ್ಸ್ XI ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ವಿರುದ್ಧ. ಇನ್ನು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ಒಂದಿಷ್ಟು ಪಂದ್ಯಗಳನ್ನು ಸೋತಿದೆ.

ಮುಂಬೈ ಇಂಡಿಯನ್ಸ್ ಹೆಚ್ಚು ಬಾರಿ ಸೋಲನುಭವಿಸಿರುವ ತಂಡಗಳ ಪಟ್ಟಿ
* ಕಿಂಗ್ಸ್ XI ಪಂಜಾಬ್ ವಿರುದ್ಧ 12* ಬಾರಿ
* ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ಬಾರಿ
* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 12 ಬಾರಿ
* ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ಬಾರಿ
* ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ಬಾರಿ

Story first published: Monday, October 19, 2020, 12:29 [IST]
Other articles published on Oct 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+