ಐಪಿಎಲ್ 2020ರ ಅತ್ಯಂತ ದುಬಾರಿ ಕೊನೆ ಓವರ್ ಎಸೆದ ಲುಂಗಿ ಎನ್‌ಗಿಡಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ಪಂದ್ಯದಿಂದಲೇ ದಾಖಲೆಗಳು ಧ್ವಂಸವಾಗುತ್ತಿವೆ. ಐಪಿಎಲ್ 2020ರಲ್ಲಿ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಎನ್‌ಗಿಡಿ ಅತ್ಯಂತ ದುಬಾರಿ ಕೊನೆ ಓವರ್ ಎಸೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರದಂದು ನಡೆದ ಪಂದ್ಯದಲ್ಲಿ ಎನ್‌ಗಿಡಿ ಎಸೆದ 20ನೇ ಓವರ್ ನಲ್ಲಿ ರಾಜಸ್ಥಾನ್ ಬ್ಯಾಟ್ಸ್ ಮನ್ ಗಳು 30ರನ್ ಗಳಿಸಿದರು. ಇದು ಜಂಟಿಯಾಗಿ ಅತ್ಯಂತ ದುಬಾರಿ ಕೊನೆ ಓವರ್ ಎನಿಸಿಕೊಂಡಿದೆ. ರಾಜಸ್ಥಾನ್ ತಂಡದ ಜೋಫ್ರಾ ಆರ್ಚರ್ ಅವರು ಇನ್ನಿಂಗ್ಸ್ ನ ಕೊನೆ ಓವರ್ ನಲ್ಲಿ ಸತತ 4 ಸಿಕ್ಸರ್ ಸಿಡಿಸಿದರು. ಗಾಯದ ಮೇಲೆ ಬರೆ ಎಳೆದಂತೆ ಎನ್ ಗಿಡಿ 2 ನೋಬಾಲ್ ಎಸೆದಿದ್ದರು. ಹೀಗಾಗಿ 2 ಎಸೆತದಲ್ಲೇ 26 ರನ್ ಹೊಡೆಸಿಕೊಂಡಿದ್ದರು.
ಕೊನೆ ಓವರ್ ರನ್ ಮಳೆಯಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 216ರನ್ ಸ್ಕೋರ್ ಮಾಡಿತು. ಈ ಬೃಹತ್ ಗುರಿ ಚೇಸ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ರನ್ ಗಳಿಂದ ಸೋಲು ಅನುಭವಿಸಿದೆ.
ಲುಂಗಿ ಎನ್‌ಗಿಡಿಗೂ ಮುನ್ನ ದುಬಾರಿ ಕೊನೆ ಓವರ್ ಎಸೆದವರು:
30 ರನ್: ದಿಂಡಾ, ಪುಣೆ ವಿರುದ್ಧ ಮುಂಬೈ, 2017
30 ರನ್: ಜೋರ್ಡಾನ್, ಪಂಜಾಬ್ ವಿರುದ್ಧ ಡೆಲ್ಲಿ, 2020
30 ರನ್: ಎನ್‌ಗಿಡಿ, ಚೆನ್ನೈ ವಿರುದ್ಧ ರಾಜಸ್ಥಾನ, 2020
29ರನ್: ಮಾವಿ, ಕೋಲ್ಕತಾ ವಿರುದ್ಧ ಡೆಲ್ಲಿ, 2018
29ರನ್: ಬ್ರಾವೊ, ಮುಂಬೈ ವಿರುದ್ಧ ಚೆನ್ನೈ, 2019
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications