ಐಪಿಎಲ್ ಇತಿಹಾಸದಲ್ಲೇ ಕೆಟ್ಟ ದಾಖಲೆಗೆ ಸಾಕ್ಷಿಯಾದ ಸಿಎಸ್ಕೆ ನಾಯಕ ಧೋನಿ
ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ, ಇದುವರೆಗೆ ಐಪಿಎಲ್ ಪಂದ್ಯ ಸಾಗುತ್ತಿರುವ ರೀತಿ, ಖಂಡಿತ ಅವರ ಒತ್ತಡವನ್ನು ಹೆಚ್ಚಿಸುವಂತೆ ಮಾಡಿದೆ.
ಐಪಿಎಲ್ ನಲ್ಲಿ ಮಾತ್ರ ನಾಯಕನ ಜವಾಬ್ದಾರಿ ಧೋನಿ ಮೇಲೆ ಇರುವುದರಿಂದ, ಈ ಪ್ರತಿಷ್ಠಿತ ಟೂರ್ನಮೆಂಟ್ ನಲ್ಲಿ ಧೋನಿ ನಿರಾಳವಾಗಿ ಆ ಹುದ್ದೆಯನ್ನು ನಿಭಾಯಿಸಿ, ಭಾರೀ ಸಾಧನೆಯನ್ನು ಮಾಡಲಿದ್ದಾರೆ ಎನ್ನುವ ಲೆಕ್ಕಾಚಾರ ಸದ್ಯಕ್ಕೆ ಉಲ್ಟಾ ಹೊಡೆಯುತ್ತಿದೆ.
ಮುಂಬೈ ಇಂಡಿಯನ್ಸ್ ಜೊತೆಗಿನ ಆರಂಭಿಕ ಪಂದ್ಯವನ್ನು ಗೆದ್ದಿರುವ ಚೆನ್ನೈ ತಂಡ ಅದಾದ ನಂತರ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯವನ್ನು ಸೋತಿದೆ. ಅದಕ್ಕೆ, ಪ್ರಮುಖ ಆಟಗಾರರಿಬ್ಬರು ಗೈರೂ ಕಾರಣವಾಗಿರಬಹುದು.
ಚೆನ್ನೈ ತಂಡ, ತನ್ನ ಟೂರ್ನಿಯ ನಾಲ್ಕನೇ ಪಂದ್ಯವನ್ನು ಶುಕ್ರವಾರ (ಅ 2) ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಆಡಲಿದೆ. ಸೋಲಿನ ವಿಚಾರದಲ್ಲಿ ಎರಡೂ ತಂಡದ ನಾಯಕರು ಸಮಾನ ಮನಸ್ಕರು. ಧೋನಿ ಕೆಟ್ಟ ದಾಖಲೆಗೆ ಸಾಕ್ಷಿ. ಏನದು? ಮುಂದೆ ಓದಿ..

ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಮಾಲಕತ್ವದ ಚೆನ್ನೈ ಸೂಪರ್ ಕಿಂಗ್ಸ್
ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಮಾಲಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2008ರಿಂದ ಮುನ್ನಡೆಸಿಕೊಂಡು ಬರುತ್ತಿರುವ ಮಹೇಂದ್ರ ಸಿಂಗ್ ಧೋನಿ, ಇದುವರೆಗೆ 193 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಐಪಿಎಲ್ ಆರಂಭವಾದಾಗಿನಿಂದ ಕೆಟ್ಟ ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಚೆನ್ನೈ ತಂಡ ಕೊನೆಯ ಸ್ಥಾನದಲ್ಲಿ
ಹಾಲೀ ಐಪಿಎಲ್ ಆವೃತ್ತಿಯ ಎರಡನೇ ಪಂದ್ಯದಲ್ಲಿ ಚೆನ್ನೈ ತಂಡ, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ದ ಹದಿನಾರು ರನ್ ನಿಂದ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 44 ರನ್ ಗಳಿಂದ ಸೋತಿದೆ. ಹಾಗಾಗಿ, ಅಂಕಪಟ್ಟಿಯಲ್ಲಿ ಚೆನ್ನೈ ತಂಡ ಕೊನೆಯ ಸ್ಥಾನದಲ್ಲಿದೆ.

ಸನ್ ರೈಸರ್ಸ್ ಮತ್ತು ಕಿಂಗ್ಸ್ ಇಲವೆನ್ ಪಂಜಾಬ್
ಚೆನ್ನೈ ರೀತಿಯಲ್ಲಿ ಸನ್ ರೈಸರ್ಸ್ ಮತ್ತು ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಕೂಡಾ ಒಂದು ಪಂದ್ಯವನ್ನು ಮಾತ್ರ ಗೆದ್ದಿರುವುದು. ಆದರೆ, ಅವೆರಡು ತಂಡಗಳ ನೆಟ್ ರನ್ ರೇಟ್ -0.228 (ಹೈದರಾಬಾದ್) ಮತ್ತು ಪಂಜಾಬ್ ತಂಡ +0.521, ಚೆನ್ನೈ ತಂಡಕ್ಕಿಂತ ಉತ್ತಮವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ
ಚೆನ್ನೈ ತಂಡ ಒಂದು ಪಂದ್ಯವನ್ನು ಗೆದ್ದು ಎರಡು ಅಂಕಗಳಿಸಿದೆ. ಸರಾಸರಿ -0.840 ರನ್ ರೇಟ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹಾಗಾಗಿ, ಇದುವರೆಗಿನ ಇತಿಹಾಸದಲ್ಲಿ ಚೆನ್ನೈ ತಂಡ, ಕೊನೆಯ ಸ್ಥಾನದಲ್ಲಿದ್ದ ಉದಾಹರಣೆಗಳಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications