ಐಪಿಎಲ್‌ನಲ್ಲಿ ಕನ್ನಡಿಗ ಮನೀಶ್ ಪಾಂಡೆ ವಿಶೇಷ ಮೈಲಿಗಲ್ಲು

ದುಬೈ: ಕನ್ನಡಿಗ ಮನೀಶ್ ಪಾಂಡೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ 3000 ರನ್ ಬಾರಿಸಿದ ಆಟಗಾರನಾಗಿ ಮನೀಶ್ ಗುರುತಿಸಿಕೊಂಡಿದ್ದಾರೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 26ನೇ ಪಂದ್ಯದಲ್ಲಿ ಪಾಂಡೆ ಈ ಸಾಧನೆ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ, 44 ಎಸೆತಗಳಿಗೆ 54 ರನ್ ಬಾರಿಸಿ ಜಯದೇವ್ ಉನಾದ್ಕತ್ ಓವರ್‌ನಲ್ಲಿ ರಾಹುಲ್ ತೆವಾಟಿಯಾಗೆ ಕ್ಯಾಚ್ ಇತ್ತು ನಿರ್ಗಮಿಸಿದರು. ಡೇವಿಡ್ ವಾರ್ನರ್ 48, ಪಾಂಡೆ 54, ಕೇನ್ ವಿಲಿಯಮ್ಸನ್ 22 ರನ್‌ನೊಂದಿಗೆ ಹೈದರಾಬಾದ್ 158 ರನ್ ಗಳಿಸಿತ್ತು.
ಭಾನುವಾರದ ಪಂದ್ಯದಲ್ಲಿ 3000 ರನ್ ಪೂರೈಸಲು ಪಾಂಡೆಗೆ ಬರೀ 9 ರನ್‌ಗಳು ಬೇಕಿತ್ತು. ಈ ರನ್ ಗಳಿಸಿದ ಮನೀಶ್ ಐಪಿಎಲ್‌ನಲ್ಲಿ 3000 ರನ್ ಬಾರಿಸಿದ 16ನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 137 ಪಂದ್ಯಗಳನ್ನಾಡಿರುವ ಮನೀಶ್ 3045 ರನ್ ಬಾರಿಸಿದಂತಾಗಿದೆ.
ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಯೂ ಮನೀಶ್ ಅವರದ್ದು. ದಕ್ಷಿಣ ಆಫ್ರಿಕಾದಲ್ಲಿ 2009ರಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ 73 ಎಸೆತಗಳಲ್ಲಿ ಅಜೇಯ 114 ರನ್ ಸಿಡಿಸಿದ್ದರು. ಅಂದ್ಹಾಗೆ ಭಾನುವಾರದ ಪಂದ್ಯದಲ್ಲಿ ರಾಜಸ್ಥಾನ್ 5 ವಿಕೆಟ್ ಗೆಲುವನ್ನಾಚರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications