ಮನೀಶ್ ಭರ್ಜರಿ ಬ್ಯಾಟಿಂಗ್: 8 ಸಿಕ್ಸರ್, 28 ಎಸೆತಗಳಲ್ಲಿ ಅರ್ಧ ಶತಕ

ದುಬೈ: ಕನ್ನಡಿಗ ಮನೀಶ್ ಪಾಂಡೆ ಭರ್ಜರಿ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದಾರೆ. ಗುರುವಾರ (ಅಕ್ಟೋಬರ್ 22) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 40ನೇ ಪಂದ್ಯದಲ್ಲಿ ಮನೀಶ್ ಸ್ಫೋಟಕ ಬ್ಯಾಟಿಂಗ್‌ಗಾಗಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಾಂಡೆ ಅಬ್ಬರದ ಬ್ಯಾಟಿಂಗ್ ಕಾಣಸಿಕ್ಕಿತು.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮನೀಶ್ 47 ಎಸೆತಗಳಿಗೆ 83 ರನ್ ಕೊಡುಗೆ ನೀಡಿದ್ದರು. ಇದರಲ್ಲಿ 4 ಫೋರ್ಸ್, 8 ಸಿಕ್ಸರ್‌ಗಳೂ ಸೇರಿದ್ದವು. ಅಲ್ಲದೆ ಪಂದ್ಯದಲ್ಲಿ ಹೈದರಾಬಾದ್ ಭರ್ಜರಿ 8 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿದೆ.
ಇದೇ ಪಂದ್ಯದಲ್ಲಿ ಮನೀಶ್ ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಕೂಡ ಪೂರೈಸಿಕೊಂಡಿದ್ದು ಕಾಣಸಿಕ್ಕಿತು. ಇದು ಪಾಂಡೆ ಐಪಿಎಲ್‌ನಲ್ಲಿ ಬಾರಿಸಿದ 18ನೇ ಅರ್ಧ ಶತಕ. ಮನೀಶ್ ಐಪಿಎಲ್‌ನಲ್ಲಿ ಒಂದು ಶತಕದ ದಾಖಲೆಯೂ ಹೊಂದಿದ್ದಾರೆ.
140 ಐಪಿಎಲ್ ಪಂದ್ಯಗಳನ್ನಾಡಿರುವ ಮನೀಶ್ 29.6ರ ಸರಾಸರಿಯಲ್ಲಿ 122.01 ಸ್ಟ್ರೈಕ್ ರೇಟ್‌ನಲ್ಲಿ 3138 ರನ್ ಗಳಿಸಿದ್ದಾರೆ. 114 ಅತ್ಯಧಿಕ ವೈಯಕ್ತಿಕ ರನ್ ಬಾರಿಸಿರುವ ಮನೀಶ್ 274 ಫೋರ್ಸ್, 90 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications