ಸೂಪರ್ ಮ್ಯಾನ್ ರೀತಿ ಕ್ಯಾಚ್ ಪಡೆದ ಮನೀಶ್ ಪಾಂಡೆ: ವಿಡಿಯೋ

ಶಾರ್ಜಾ: ಭಾರತದ ಆಟಗಾರ, ಕನ್ನಡಿಗ ಮನೀಶ್ ಪಾಂಡೆ ಉತ್ತಮ ಬ್ಯಾಟ್ಸ್‌ಮನ್ ಅಷ್ಟೇ ಅಲ್ಲ, ಬೆಸ್ಟ್ ಫೀಲ್ಡರ್ ಕೂಡ. ಇದನ್ನು ಮನೀಶ್ ಮತ್ತೆ ಸಾಭೀತು ಪಡಿಸಿದ್ದಾರೆ. ಭಾನುವಾರ (ಅಕ್ಟೋಬರ್ 4) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಪಂದ್ಯದಲ್ಲಿ ಮನೀಶ್ ಅವರ ಅದ್ಭುತ ಕ್ಯಾಚ್ ಕಾಣಸಿಕ್ಕಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ಅವರು ಇಶಾನ್ ಕಿಶನ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. 14.6ನೇ ಓವರ್‌ನಲ್ಲಿ ಸಂದೀಪ್ ಶರ್ಮಾ ಎಸೆತಕ್ಕೆ ಕಿಶನ್ 31 ರನ್‌ಗೆ ವಿಕೆಟ್ ಒಪ್ಪಿಸಿದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿ ಮನೀಶ್ ಒಂದು ಕ್ಯಾಚ್ ಬಿಟ್ಟಿದ್ದರು. ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಮಿಸ್ ಮಾಡಿಕೊಂಡಿದ್ದರು. ಆದರೆ 14.6ನೇ ಓವರ್‌ನಲ್ಲಿ ಮನೀಶ್ ಮಿಸ್ ಮಾಡಿಕೊಳ್ಳಲಿಲ್ಲ. ಡೀಪ್‌ನಲ್ಲಿದ್ದ ಪಾಂಡೆ ಸೂಪರ್ ಮ್ಯಾನ್ ರೀತಿಯಲ್ಲಿ ಹಾರಿ ಕ್ಯಾಚ್ ಪಡೆದು ಬೆರಗು ಮೂಡಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಮುಂಬೈ ಇಂಡಿಯನ್ಸ್, 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗೆ 7 ವಿಕೆಟ್ ಕಳೆದು 174 ರನ್ ಬಾರಿಸಿ 34 ರನ್‌ನಿಂದ ಸೋತಿತು. ಪಂದ್ಯದಲ್ಲಿ ಮನೀಶ್ 30 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications