ಐಪಿಎಲ್: ಹೈದರಾಬಾದ್ vs ಪಂಜಾಬ್, ಎರಡರಲ್ಲಿ ಬಲಿಷ್ಠ ಯಾವುದು?

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 22ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳು ಕಾದಾಡಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಗೆಲುವು ಬಹಳ ಪ್ರಮುಖವಾಗಿದೆ. ಯಾಕೆಂದರೆ ಈವರೆಗೆ ನಡೆದ ಪಂದ್ಯಗಳಲ್ಲಿ ಐದು ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವೂ ಉತ್ತಮ ಸ್ಥಿತಿಯಲ್ಲಿ ಇಲ್ಲ.
ಎಸ್‌ಆರ್‌ಎಚ್ ಕೂಡ ಆಡಿದ ಐದು ಪಂದ್ಯಗಳಲ್ಲಿ 2 ಗೆಲುವನ್ನಷ್ಟೇ ಕಂಡಿದೆ. ಹೈದರಾಬಾದ್ ಈಗ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಂಜಾಬ್‌ನಲ್ಲಿ ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕೆಎಲ್ ರಾಹುಲ್ ಅವರಂಥ ಆಟಗಾರರಿದ್ದರೆ, ಹೈದರಾಬಾದ್‌ನಲ್ಲಿ ಡೇವಿಡ್ ವಾರ್ನರ್, ಜಾನಿ ಬೇಸ್ಟೋವ್, ಕೇನ್ ವಿಲಿಯಮ್ಸನ್ ಅವರಂತ ಅಪಾಯಕಾರಿಗಳಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳಲ್ಲಿ ಬಲಿಷ್ಠರಾರು? ಕೆಳಗೊಂದಿಷ್ಟು ಕುತೂಹಲಕಾರಿ ಮಾಹಿತಿಗಳಿವೆ ನೋಡಿ.

ಎಚ್‌ಆರ್‌ಎಚ್ vs ಕೆXIಪಿ ಮುಖಾಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 14
* ಎಸ್‌ಆರ್‌ಹೆಚ್ ಗೆದ್ದ ಪಂದ್ಯಗಳು: 10
* ಕೆXIಪಿ ಗೆದ್ದ ಪಂದ್ಯಗಳು: 4

ಆಡಿದ ಪಂದ್ಯಗಳ ತಾಣ
* ಭಾರತದಲ್ಲಿ ಆಡಿದ ಪಂದ್ಯ: 13 (ಎಸ್‌ಆರ್‌ಹೆಚ್ 10, ಕೆXIಪಿ 3)
* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಎಸ್‌ಆರ್‌ಹೆಚ್ 0, ಕೆXIಪಿ 1)
* ಕೆXIಪಿ ವಿರುದ್ಧ ಎಸ್‌ಆರ್‌ಹೆಚ್ ಸರಾಸರಿ ಸ್ಕೋರ್: 164

ಹೆಚ್ಚಿನ ರನ್‌ಗಳು
* ಎಸ್‌ಆರ್‌ಹೆಚ್ ವಿರುದ್ಧ ಕೆXIಪಿ ಸರಾಸರಿ ಸ್ಕೋರ್: 160
* ಎಸ್‌ಆರ್‌ಎಚ್‌ಗೆ ಹೆಚ್ಚಿನ ರನ್: 574 (ಡೇವಿಡ್ ವಾರ್ನರ್)
* ಕೆXIಪಿಗೆ ಹೆಚ್ಚಿನ ರನ್: 200 (ಲೋಕೇಶ್ ರಾಹುಲ್)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ವಿಕೆಟ್‌ಗಳು: 11 (ರಶೀದ್ ಖಾನ್)

ಹೆಚ್ಚಿನ ವಿಕೆಟ್‌ಗಳು
* ಕೆXIಪಿಗೆ ಹೆಚ್ಚಿನ ವಿಕೆಟ್‌ಗಳು: 3 (ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಶಮಿ)
* ಎಸ್‌ಆರ್‌ಎಚ್‌ಗಾಗಿ ಹೆಚ್ಚಿನ ಕ್ಯಾಚ್‌ಗಳು: 8 (ಡೇವಿಡ್ ವಾರ್ನರ್)
* ಕೆXIಪಿಗೆ ಹೆಚ್ಚಿನ ಕ್ಯಾಚ್‌ಗಳು: 2 (ಮಾಯಾಂಕ್ ಅಗರ್‌ವಾಲ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕರುಣ್ ನಾಯರ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications