
ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 8) ಇಂಡಿಯನ್ ಪ್ರೀಮಿಯರ್ ಲೀಗ್ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಕಿಂಗ್ಸ್ XI ಪಂಜಾಬ್ ಈವರೆಗೆ ಆಡಿರುವ 5 ಪಂದ್ಯಗಳಲ್ಲಿ 1 ಪಂದ್ಯ ಗೆದ್ದು 4ರಲ್ಲಿ ಸೋತಿದೆ. ಸನ್ ರೈಸರ್ಸ್ ಹೈದರಾಬಾದ್ ಆಡಿದ 5ರಲ್ಲಿ 2 ಗೆಲುವು ಕಂಡಿದೆ. ಹೀಗಾಗಿ ಪಾಯಿಂಟ್ಸ್ ಟೇಬಲ್‌ನ ತಳದಲ್ಲಿರುವ ಪಂಜಾಬ್‌ಗೆ ಇಂದಿನ ಗೆಲುವು ತುಂಬಾ ಪ್ರಮುಖವೆನಿಸಿದೆ.
ಪಂದ್ಯ ನಡೆಯುವ ದಿನವಾದ ಗುರುವಾರ ದುಬೈನಲ್ಲಿ 36 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ದುಬೈ ಸ್ಟೇಡಿಯಂ ಬ್ಯಾಟಿಂಗ್ ಫ್ಲೆಂಡ್ಲಿ ಆಗಿರುವುದರಿಂದ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆರಿಸುವ ಸಾಧ್ಯತೆ ಹೆಚ್ಚಿದೆ. ಅಥವಾ ಹಿಂದಿನ ಪಂದ್ಯಗಳ ಲೆಕ್ಕಾಚರದ ಆಧಾರದಲ್ಲಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ದುಕೊಳ್ಳಲೂ ಬಹುದು. 7 pmಗೆ ಟಾಸ್ ನಡೆಯಲಿದೆ.
ಎಸ್‌ಆರ್‌ಎಚ್ ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ಸಿ), ಜಾನಿ ಬೈರ್‌ಸ್ಟೋವ್ (ಡಬ್ಲ್ಯೂಕೆ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್. ಸಂದೀಪ್ ಶರ್ಮಾ, ಟಿ ನಟರಾಜನ್, ಸಿದ್ದಾರ್ಥ್ ಕೌಲ್ / ಖಲೀಲ್ ಅಹ್ಮದ್.
ಕೆXIಪಿ ಸಂಭಾವ್ಯ ತಂಡ: ಕೆ.ಎಲ್. ರಾಹುಲ್ (ಸಿ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್ (ಡಬ್ಲ್ಯೂಕೆ), ಸರ್ಫರಾಜ್ ಖಾನ್, ಹರ್ಪ್ರೀತ್ ಬ್ರಾರ್ / ಮುರುಗನ್ ಅಶ್ವಿನ್, ಮುಜೀಬ್ ಉರ್ ರಹಮಾನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್ / ಹಾರ್ಡಸ್ ವಿಲ್ಜೋಯೆನ್