ಐಪಿಎಲ್ 2020: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು

ಐಪಿಎಲ್‌ನಲ್ಲಿ ಮತ್ತೊಂದು ಕುತೂಹಲಕಾರಿ ಪಂದ್ಯಾಟ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಮೊದಲ ಸುತ್ತಿನ ಕಾದಾಟದಲ್ಲಿ ಕಿಂಗ್ಸ್ ಇಲೆವೆನ್ ಕೊಹ್ಲಿ ಪಡೆಗೆ ಸೋಲಿನ ರುಚಿಯನ್ನು ಉಣಿಸಿತ್ತು.
ಕಿಂಗ್ಸ್ ಇಲೆವೆನ್ ಪಂಜಾಬ್ ಟೂರ್ನಿಯಲ್ಲಿ ಒಂದೇ ಒಂದು ಗೆಲುವನ್ನು ಸಾಧಿಸಿದ್ದು ಅದು ಆರ್‌ಸಿಬು ವಿರುದ್ಧವೇ ಆಗಿದೆ. ಇಂದಿನ ಪಂದ್ಯದ ಮೂಲಕ ಜಯಪಡೆದು ಟೂರ್ನಿಯಲ್ಲಿ ಜೀವಂತವಾಗಿರುವ ಪ್ರಯತ್ನವನ್ನು ಕೆಎಲ್ ರಾಹುಲ್ ನೇತೃತ್ವದ ತಂಡ ನಡೆಸಲಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಪಡೆ ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಶತಪ್ರಯತ್ನವನ್ನು ನಡೆಸುವುದು ಪಕ್ಕಾ.

ಗೇಲ್ ಕಣಕ್ಕಿಳಿಯುತ್ತಾರಾ?
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಂದು ಕ್ರಿಸ್ ಗೇಲ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಿಂಗ್ಸ್ ಕ್ರಮಾಂಕದಲ್ಲಿ ಸಣ್ಣ ಬದಲಾವಣೆಗಳು ಕಾಣಬಹುದು. ಕೆಎಲ್ ರಾಹುಲ್ ಹಾಗೂ ಗೇಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದ್ದು ಮಯಾಂಕ್ ಅಗರ್ವಾಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿಯುವ ಸಾಧ್ಯತೆ ನಿಚ್ಚಳವಾಗಿದೆ.

ಆರ್‌ಸಿಬಿ ಬೌಲಿಂಗ್ ಪಡೆಯ ಯಶಸ್ಸು
ಇನ್ನು ವಿರಾಟ್ ಪಡೆಗೆ ತಲೆನೋವಾಗಿದ್ದ ಡೆತ್ ಓವರ್ ಬೌಲಿಂಗ್‌ಗೆ ಕ್ರಿಸ್ ಮೋರಿಸ್ ಪರಿಹಾರವನ್ನು ಒದಗಿಸುತ್ತಿದ್ದಾರೆ. ಸ್ಪಿನ್ ಬೌಲರ್‌ಗಳಾದ ಯುಜುವೇಂದ್ರ ಚಾಹಲ್ ಹಾಗೂ ವಾಶಿಂಗ್ಟನ್ ಸುಂದರ್ ಅದ್ಭುತ ಯಶಸ್ಸು ನೀಡುತ್ತಿದ್ದಾರೆ. ಇದು ನಾಯಕ ಕೊಹ್ಲಿಯ ಒತ್ತಡವನ್ನು ಕಡಿಮೆ ಮಾಡಿದೆ

ಸಂಭಾವ್ಯ ತಂಡ ಆರ್‌ಸಿಬಿ
ಆರ್‌ಸಿಬಿ: ಆರೊನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ಕ್ರಿಸ್ ಮೋರಿಸ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಮತ್ತು ಯುಜುವೇಂದ್ರ ಚಾಹಲ್

ಸಂಭಾವ್ಯ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್
ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್ (ನಾಯಕ ಹಾಗೂ ವಿಕೆಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ಕ್ರಿಸ್ ಜೋರ್ಡಾನ್ ಮುಜೀಬ್-ಉರ್-ರಹಮಾನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಮತ್ತು ಅರ್ಷ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications