Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಬೆಂಗಳೂರಿಗೆ ಇಂದು ರಾಜಸ್ಥಾನ್ ಎದುರಾಳಿ, ಸಂಭಾವ್ಯ ತಂಡ

IPL 2020: Match 33, RCB vs RR Preview, Predicted Playing 11, Pitch Report, Toss Timing And Weather

ಐಪಿಎಲ್‌ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟಕ್ಕೆ ಇಳಿಯಲಿದೆ. ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ 8 ಪಂದ್ಯಗಳನ್ನಾಡಿದ್ದು ಈವರೆಗೆ 3 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಆಡಿದ 8 ಪಂದ್ಯಗಳಲ್ಲಿ 3 ಗೆಲುವನ್ನಷ್ಟೇ ಕಂಡಿದ್ದು 5 ಸೋಲು ಅನುಭವಿಸಿದೆ.

ದುಬೈ ಅಂತಾರಾಷ್ಟ್ರಿಯ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಈ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು ಟಾಸ್ 3 ಗಂಟೆಗೆ ನಡೆಯಲಿದೆ. ಸಹಜವಾಗಿಯೇ ಬಿಸಿಲಿನ ಧಗೆ ಹೆಚ್ಚಿನ ಪ್ರಮಾಣದಲ್ಲಿರಲಿದ್ದು 35 ಡಿಗ್ರಿ ಸೆಲ್ಸಿಯಸ್ ಆಸಿಪಾಸಿನಲ್ಲಿ ಉಷ್ಣತೆಯಿರಲಿದೆ.

ದುಬೈ ಕ್ರೀಡಾಂಗಣದ ದಾಖಲೆಯನ್ನು ಗಮನಿಸಿಕೊಂಡು ಟಾಸ್ ಗೆದ್ದ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚಿದೆ. ಪಿಚ್ ನಿಧಾನಗತಿಯಲ್ಲಿ ವರ್ತಿಸುತ್ತಿದ್ದು ಸ್ಪಿನ್ನರ್‌ಗಳಿಗೆ ಎಚ್ಚಿನ ನೆರವು ದೊರೆಯುವ ಸಾಧ್ಯತೆಯಿದೆ. ಬ್ಯಾಟ್ಸ್‌ಮನ್‌ಗಳಿಗೂ ಕೂಡ ಪಿಚ್‌ ಲಾಭ ದೊರೆಯುವ ಸಾಧ್ಯತೆಯಿದೆ

ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ದೇವದತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗುರ್ಕೀರತ್ ಸಿಂಗ್ ಮನ್, ಶಿವಂ ದುಬ್, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಕ್ರಿಸ್ ಮೋರಿಸ್, ಯುಜುವೇಂದ್ರ ಚಾಹಲ್

ಆರ್‌ಆರ್‌ ಸಂಭಾವ್ಯ ಆಡುವ ಬಳಗ: ಜೋಸ್ ಬಟ್ಲರ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್ / ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ಮಹಿಪಾಲ್ ಲೋಮರ್, ಟಾಮ್ ಕರ್ರನ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್ / ವರುಣ್ ಆರನ್

Story first published: Saturday, October 17, 2020, 10:35 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+