ಹೈದರಾಬಾದ್ vs ಪಂಜಾಬ್ ಪೈಪೋಟಿ: ಸಂಭಾವ್ಯ ತಂಡ, ಪಿಚ್ ರಿಪೋರ್ಟ್

ಐಪಿಎಲ್ ಅಂಗಳದಲ್ಲಿ ಇಂದು ಮತ್ತೊಂದು ಪ್ರಮುಖ ಹೋರಾಟ ನಡೆಯಲಿದೆ. ಈ ಕಾದಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿದೆ. ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣುತ್ತಿರುವ ಈ ಎರಡು ತಂಡಗಳು ಈ ಪಂದ್ಯದಲ್ಲಿ ಗೆಲುವನ್ನು ಕಾಣಲೇಬೇಕಿದೆ. ಹಾಗಾದಲ್ಲಿ ಮಾತ್ರವೇ ತನ್ನ ಕನಸು ನನಸಾಗಲು ಸಾಧ್ಯವಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಎರಡನೇ ಸುತ್ತಿನ ಪಂದ್ಯಗಳಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಸತತ ಸೋಲುಗಳನ್ನೇ ಕಂಡಿದ್ದ ಪಂಜಾಬ್ ಕಳೆದ ಮೂರು ಪಂದ್ಯಗಳಲ್ಲಿ ಗೆಲುವನ್ನೇ ಸಾಧಿಸಿಕೊಂಡು ಬಂದಿರುವುದು ತಂಡದ ಪಾಲಿಗೆ ಸಕಾರಾತ್ಮಕ ಅಂಶವಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ನ ವಿರುದ್ಧದವೂ ಇದೇ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ ರಾಹುಲ್ ಬಳಗ.
ಇನ್ನು ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೂಡ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರಂಭಿಕರಾದ ವಾರ್ನರ್ ಹಾಗೂ ಬೈರ್‌ಸ್ಟೋವ್ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರೂ ಯಾವುದೇ ಸಂದರ್ಭದಲ್ಲಿ ಎದುರಾಳಿ ತಂಡಕ್ಕೆ ಕಂಟಕವಾಗಬಲ್ಲ ಆಟಗಾರರು ಎಂಬುದರಲ್ಲಿ ಅನುಮಾನವಿಲ್ಲ.

ಹೈದರಾಬಾದ್ vs ಪಂಜಾಬ್
ಪಂದ್ಯದ ಮಾಹಿತಿ ದಿನಾಂಕ: 24 ಅಕ್ಟೋಬರ್ 2020 (ಶನಿವಾರ)
ಸಮಯ: 7:30 PM (ಭಾರತೀಯ ಕಾಲಮಾನ)
ಸ್ಥಳ: ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಮ್, ದುಬೈ

ಹವಾಮಾನ ಮುನ್ಸೂಚನೆ
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಸಂಜೆ ನಡೆಯಲಿದೆ. ಆದರೆ ತಾಪಮಾನ ಮಾತ್ರ 30 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲೇ ಇರಲಿದೆ. ಆದರೆ ದ್ವಿತಿಯಾರ್ಧದ ವೇಳೆ ಇಬ್ಬನಿ ಬೀಳುವ ಸಾಧ್ಯತೆಯಿದೆ.

ಪಂಜಾಬ್ vs ಹೈದರಾಬಾದ್ ಪಿಚ್ ವರದಿ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಕ್ರೀಡಾಕೂಟ ಮಧ್ಯಭಾಗದಲ್ಲಿ ಸಾಕಷ್ಟು ಸಮತೋಲಿತವಾಗಿದೆ. ಇದು ಬ್ಯಾಟ್ ಹಾಗೂ ಬೌಲಿಂಗ್ ನಡುವೆ ಸಮಾನವಾದ ಸ್ಪರ್ಧೆಗೆ ಪುರಕವಾಗಿದೆ. ಸ್ಟ್ರೋಕ್ ಹೊಡೆತಗಳಿಗೆ ಅದ್ಭುತವಾದ ಮೇಲ್ಮೈಯಾಗಿದ್ದು ಬೌಲರ್‌ಗಳಿಗೂ ಲಾಭವಾಗಲಿದೆ. ಎರಡನೇ ಇನ್ನಿಂಗ್ಸ್‌ಗೆ ಇಬ್ಬನಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭಾವ್ಯ ತಂಡ
ಕಿಂಗ್ಸ್ ಇಲೆವೆನ್ ಪಂಜಾಬ್: ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ, ಜೇಮ್ಸ್ ನೀಶಮ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಮತ್ತು ಅರ್ಷ್‌ದೀಪ್ ಸಿಂಗ್

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಸನ್‌ರೈಸರ್ಸ್ ಹೈದರಾಬಾದ್: ಜಾನಿ ಬೈರ್‌ಸ್ಟೋವ್ (ಡಬ್ಲ್ಯೂಕೆ), ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಮತ್ತು ಟಿ ನಟರಾಜನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications