ಐಪಿಎಲ್: ಕೋಲ್ಕತ್ತಾ vs ಪಂಜಾಬ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

ಶಾರ್ಜಾ: ಸೋಮವಾರ (ಅಕ್ಟೋಬರ್ 26) ಇಂಡಿಯನ್ ಪ್ರೀಮಿಯರ್ ಲೀಗ್ 46ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, 7 pmಗೆ ಟಾಸ್, 7.30 pmಗೆ ಪಂದ್ಯ ಆರಂಭವಾಗಲಿದೆ. ಎರಡೂ ತಂಡಗಳೂ ಗೆಲುವಿಗಾಗಿ ಎದುರು ನೋಡುತ್ತಿರುವುದರಿಂದ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.
11 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಕಲೆ ಹಾಕಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಇಂದಿನ ಗೆಲುವು ಪ್ಲೇ ಆಫ್ ಖಾತ್ರಿಪಡಿಸಿಕೊಳ್ಳಲು ಪ್ರಮುಖವಾಗಿದ್ದರೆ, 11ರಲ್ಲಿ 5 ಗೆಲುವು ಕಂಡಿರುವ ಕಿಂಗ್ಸ್ 11 ಪಂಜಾಬ್‌ಗೆ ಪ್ಲೇ ಆಫ್ ಆಸೆ ಉಳಿಸಿಕೊಳ್ಳಲು ಇಂದಿನ ಗೆಲುವು ಬೇಕೇ ಬೇಕು.
ಇಂದಿನ ಪಂದ್ಯದಲ್ಲಿ ಕೆಕೆಆರ್ ಗೆಲ್ಲುವ ಸಾಧ್ಯತೆ ಹೆಚ್ಚು. ಹಾಗಂತ ಪಂಜಾಬ್ ಕೂಡ ಗೆಲ್ಲುವ ಬಲಿಷ್ಠ ತಂಡವೇ.

3 ತಂಡಗಳು ಪ್ಲೇ ಆಫ್‌ಗೆ
ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಮುಂಬೈ ಇಂಡಿಯನ್ಸ್ (14 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (14 ಅಂಕ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಅಂಕ) ತಂಡಗಳ ಪ್ಲೇ ಆಫ್ ಪ್ರವೇಶ ಬಹುತೇಕ ಖಾತ್ರಿಯಾಗಿವೆ. ಇನ್ನು ಕೋಲ್ಕತ್ತಾ, ಪಂಜಾಬ್, ರಾಜಸ್ಥಾನ್ ಮತ್ತು ಹೈದರಾಬಾದ್ ತಂಡಗಳು ಮತ್ತೊಂದು ಸ್ಥಾನಕ್ಕಾಗಿ ಸೆಣಸಾಡಲಿವೆ.

ಹವಾಮಾನ, ಪಿಚ್ ರಿಪೋರ್ಟ್
ಪಂದ್ಯ ನಡೆಯುವ ದಿನ ಶಾರ್ಜಾದಲ್ಲಿ 33 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಶಾರ್ಜಾ ಸ್ಟೇಡಿಯಂ ಟೂರ್ನಿಯ ಆರಂಭದಲ್ಲಿ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದರೆ ಈಗ ಬೌಲರ್ಸ್‌ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ. ಇಲ್ಲಿನ ಪಿಚ್ ಕೊಂಚ ಸ್ಲೋ ಪಿಚ್ ಆಗಿದೆ.

ಪಂಜಾಬ್ ಸಂಭಾವ್ಯ ತಂಡ
ಕೆ.ಎಲ್. ರಾಹುಲ್ (ಸಿ, ಡಬ್ಲ್ಯೂಕೆ), ಮಾಯಾಂಕ್ ಅಗರ್ವಾಲ್ / ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್ / ಜೇಮ್ಸ್ ನೀಶಮ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಎಂ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್.

ಕೋಲ್ಕತ್ತಾ ಸಂಭಾವ್ಯ ತಂಡ
ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಇಯಾನ್ ಮಾರ್ಗನ್ (ಸಿ), ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ / ಕಮಲೇಶ್ ನಾಗರ್ಕೋಟಿ, ಲಾಕಿ ಫರ್ಗುಸನ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications