For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮುಂಬೈ vs ಬೆಂಗಳೂರು, ಮುಖಾಮುಖಿಯ ಅಂಕಿ-ಅಂಶಗಳು

IPL 2020: Match 48, MI vs RCB Head to Head Records and Players to Watch Out for

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಬುಧವಾರ (ಅಕ್ಟೋಬರ್ 28) ಮತ್ತೊಂದು ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಮುಂಬೈ, ಆಡಿರುವ 11 ಪಂದ್ಯಗಳಲ್ಲಿ 7 ಜಯ ದಾಖಲಿಸಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 11ರಲ್ಲಿ 7 ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ನೆಟ್ ರನ್‌ರೇಟ್ ಹೆಚ್ಚಿರುವ ಕಾರಣ ಮುಂಬೈ ಅಗ್ರ ಸ್ಥಾನದಲ್ಲಿದೆ.

ಮುಂಬೈಯಲ್ಲಿ ಇಂದು ಕ್ವಿಂಟನ್ ಡಿ ಕಾಕ್, ಇಶಾನ್ ಕಿಶಾನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಮತ್ತು ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್ ಮಿನುಗುವ ನಿರೀಕ್ಷೆಯಿದೆ.

ಆರ್‌ಸಿಬಿ-ಎಂಐ ಹಿಂದಿನ ಮುಖಾಮುಖಿಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮುಂಬೈ ಬಲಿಷ್ಠ ತಂಡವಾಗಿ ಕಾಣಿಸಿದೆ. ಆಡಿರುವ 28 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಗೆದ್ದಿದ್ದರೆ, ಬೆಂಗಳೂರು ಕೇವಲ 10ರಲ್ಲಿ ಜಯಶಾಲಿಯಾಗಿದೆ. ಮುಂಬೈ-ಬೆಂಗಳೂರು ಮುಖಾಮುಖಿಯ ಅಂಕಿ-ಅಂಶಗಳು ಕೆಳಗಿವೆ.

ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೆಡ್‌ ಟು ಹೆಡ್ ರೆಕಾರ್ಡ್ಸ್
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 28
* ಎಂಐ ಗೆದ್ದ ಪಂದ್ಯಗಳು: 18
* ಆರ್‌ಸಿಬಿ ಗೆದ್ದ ಪಂದ್ಯಗಳು: 10
* ಭಾರತದಲ್ಲಿ ಆಡಿದ ಪಂದ್ಯ: 23 (ಎಂಐ 16, ಆರ್‌ಸಿಬಿ 7)
* ಯುಎಇಯಲ್ಲಿ ಆಡಿದ ಪಂದ್ಯಗಳು: 2 (ಎಂಐ 0, ಆರ್ಸಿಬಿ 2)
* ಆರ್‌ಸಿಬಿ ವಿರುದ್ಧ ಎಂಐ ಸರಾಸರಿ ಸ್ಕೋರ್: 166
* ಎಂಐ ವಿರುದ್ಧ ಆರ್‌ಸಿಬಿ ಸರಾಸರಿ ಸ್ಕೋರ್: 159
* ಎಂಐಗೆ ಹೆಚ್ಚಿನ ರನ್: 478 (ರೋಹಿತ್ ಶರ್ಮಾ)
* ಆರ್‌ಸಿಬಿಗೆ ಹೆಚ್ಚಿನ ರನ್: 686 (ವಿರಾಟ್ ಕೊಹ್ಲಿ)
* ಎಂಐಗೆ ಹೆಚ್ಚಿನ ವಿಕೆಟ್‌ಗಳು: 16 (ಜಸ್ಪ್ರಿತ್ ಬೂಮ್ರಾ)
* ಆರ್‌ಸಿಬಿಗೆ ಹೆಚ್ಚಿನ ವಿಕೆಟ್‌ಗಳು: 17 (ಯುಜ್ವೇಂದ್ರ ಚಹಲ್)
* ಮುಂಬೈಗಾಗಿ ಹೆಚ್ಚಿನ ಕ್ಯಾಚ್‌ಗಳು: 12 (ಕೀರನ್ ಪೊಲಾರ್ಡ್)
* ಆರ್‌ಸಿಬಿಗೆ ಹೆಚ್ಚಿನ ಕ್ಯಾಚ್‌ಗಳು: 12 (ವಿರಾಟ್ ಕೊಹ್ಲಿ)

Story first published: Wednesday, October 28, 2020, 14:23 [IST]
Other articles published on Oct 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+