ಪಂಜಾಬ್ vs ರಾಜಸ್ಥಾನ್, ಸಂಬಾವ್ಯ ತಂಡಗಳು, ಪಿಚ್ ರಿಪೋರ್ಟ್

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 30) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಪ್ಲೇ ಆಫ್ ನಿಟ್ಟಿನಲ್ಲಿ ಎರಡೂ ತಂಡಗಳಿಗೂ ಇಂದಿನ ಗೆಲುವು ಪ್ರಮುಖವಾಗಿರುವುದರಿಂದ ಪಂದ್ಯ ಗೆಲ್ಲಲು ಎರಡೂ ತಂಡಗಳೂ ಜಿದ್ದಾಜಿದ್ದಿ ಹೋರಾಟ ನಡೆಸಲಿವೆ.
ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿರುವ 12 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ. ರಾಜಸ್ಥಾನ್ ತಂಡ 12ರಲ್ಲಿ 5 ಪಂದ್ಯ ಗೆದ್ದು 7ನೇ ಸ್ಥಾನ ಪಡೆದುಕೊಂಡಿದೆ.
ಪಂಜಾಬ್-ರಾಜಸ್ಥಾನ್ ಈ ಪಂದ್ಯ ಶುಕ್ರವಾರ 7.30 pmಗೆ ಆರಂಭವಾಗಲಿದ್ದು, 7 pmಗೆ ಟಾಸ್ ನಡೆಯಲಿದೆ.

ಹವಾಮಾನ ವರದಿ
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯ ನಡೆಯುವ ದಿನ ಅಬುಧಾಬಿಯಲ್ಲಿ 32 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ಗರಿಷ್ಠ ತಾಪಮಾನ 32 ಡಿಗ್ರೀ ಇದ್ದರೆ, ಕನಿಷ್ಟ ತಾಪಮಾನ 24 ಡಿಗ್ರೀ ಸೆಲ್ಶಿಯನ್ ಇರಲಿದೆ. ಸಾಮಾನ್ಯವಾಗಿ ಶೆಖೆ ಆಟಗಾರರನ್ನು ಕಾಡಲಿದೆ.

ಪಿಚ್ ರಿಪೋರ್ಟ್
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಸ್ವಲ್ಪ ಸ್ಲೋವರ್ ಪಿಚ್. ಹಾಗೆ ನೋಡಿದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಈ ಪಿಚ್ ಸಹಕಾರಿಯಾಗಬಲ್ಲದು. ಈ ಮೈದಾನದಲ್ಲಿ ಹಿಂದಿನ ಪಂದ್ಯಗಳ ಸರಾಸರಿ 184 ರನ್ ಇದೆ. 170 ರನ್ ಗಳಿಸಿದರೆ ಒಳ್ಳೆಯ ಮೊತ್ತ ಅನ್ನಿಸಲಿದೆ.

ಪಂಜಾಬ್ ಸಂಭಾವ್ಯ ತಂಡ
ಕೆ.ಎಲ್. ರಾಹುಲ್ (ಸಿ, ಡಬ್ಲ್ಯೂಕೆ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ / ಮಾಯಾಂಕ್ ಅಗರ್ವಾಲ್, ಕ್ರಿಸ್ ಜೋರ್ಡನ್, ಎಂ ಅಶ್ವಿನ್, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ.

ರಾಜಸ್ಥಾನ್ ಸಂಭಾವ್ಯ ತಂಡ
ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್ (ವಿಕೆ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಜ್‌ಪೂತ್ / ಜಯದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications