ಐಪಿಎಲ್: ಮುಂಬೈ vs ಡೆಲ್ಲಿ, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. 3.30 pmಗೆ ಪಂದ್ಯ ಆರಂಭವಾದರೆ, 3 pmಗೆ ಟಾಸ್ ನಡೆಯಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಮುಂಬೈ ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಡೆಲ್ಲಿಯ ಪ್ಲೇ ಆಫ್ ಖಾತರಿಗೆ ಇಂದಿನ ಪಂದ್ಯದ ಗೆಲುವು ಬಹುಮುಖ್ಯವೆನಿಸಿದೆ.
ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಕಂಡಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. 12ರಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ 14 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಮುಂಬೈ ಎಂದಿನ ನಾಯಕ ರೋಹಿತ್ ಶರ್ಮಾ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎಂಐ ನಾಯಕತ್ವ ಕೀರನ್ ಪೊಲಾರ್ಡ್ ವಹಿಸಿಕೊಳ್ಳಲಿದ್ದಾರೆ.

ಡೆಲ್ಲಿ vs ಮುಂಬೈ ಪ್ರಮುಖ ಆಟಗಾರರು
* ವಿಕೆಟ್ ಕೀಪರ್ - ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ರಿಷಭ್ ಪಂತ್
* ಬ್ಯಾಟ್ಸ್‌ಮನ್‌ಗಳು - ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಶ್ರೇಯಸ್ ಅಯ್ಯರ್,
* ಆಲ್-ರೌಂಡರ್ಸ್ - ಕೀರನ್ ಪೊಲಾರ್ಡ್, ಮಾರ್ಕಸ್ ಸ್ಟೋನಿಸ್, ಅಕ್ಸರ್ ಪಟೇಲ್
* ಬೌಲರ್‌ಗಳು - ಜಸ್ಪ್ರೀತ್ ಬೂಮ್ರಾ, ಕಾಗಿಸೊ ರಬಾಡಾ

ಹವಾಮಾನ, ಪಿಚ್ ರಿಪೋರ್ಟ್
ಡೆಲ್ಲಿ-ಮುಂಬೈ ಪಂದ್ಯ ನಡೆಯುವ ದಿನ ದುಬೈನಲ್ಲಿ 22ರಿಂದ 33 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಮಧ್ಯಾಹ್ನ ಶೆಖೆ ಹೆಚ್ಚಿರಲಿದೆ. ಇಲ್ಲಿನ ಮೈದಾನದಲ್ಲಿ ಹಿಂದೆ ಹೆಚ್ಚು ರನ್‌ಗಳು ಬಂದಿದ್ದನ್ನು ನೋಡಿದ್ದೆವು. ಇಲ್ಲಿ ಇಬ್ಬನಿ ಅಂಶ ಅಷ್ಟೇನು ಪರಿಣಾಮ ಬೀರುವುದಿಲ್ಲವಾದ್ದರಿಂದ ಟಾಸ್ ಗೆದ್ದರೂ ಸೋತರೂ ಅಂಥ ಸಮಸ್ಯೆಯಿಲ್ಲ. ಆದರೆ ಗೆಲ್ಲುವ ತಂಡ ಉತ್ತಮ ಪ್ರದರ್ಶನ ನೀಡಬೇಕಷ್ಟೇ.

ಡೆಲ್ಲಿ ಸಂಭಾವ್ಯ ತಂಡ
ಶಿಖರ್ ಧವನ್, ಪೃಥ್ವಿ ಶಾ/ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ವಿಕೆ), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಅಕ್ಸರ್ ಪಟೇಲ್, ಕಾಗಿಸೊ ರಬಾಡ, ಆರ್ ಅಶ್ವಿನ್, ಹರ್ಷಲ್ ಪಟೇಲ್/ತುಷಾರ್ ದೇಶಪಾಂಡೆ, ಅನ್ರಿಚ್ ನಾರ್ಟ್ಜೆ.

ಮುಂಬೈ ಸಂಭಾವ್ಯ ತಂಡ
ಕ್ವಿಂಟನ್ ಡಿ ಕಾಕ್ (ವಿಕೆ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ಸಿ), ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications