Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಚೆನ್ನೈ vs ಪಂಜಾಬ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

IPL 2020, Match 53, CSK vs KXIP Preview, Predicted Playing 11, Pitch Report, Toss Timing, Weather Forecast

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 1) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ 11 ಪಂಜಾಬ್ ತಂಡಗಳು ಸೆಣಸಾಡಲಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಈಗಾಗಲೇ ಪ್ಲೇ ಅವಕಾಶವನ್ನು ಕಳೆದುಕೊಂಡಿರುವುದರಿಂದ ಇಂದಿನ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು ತುಂಬಾ ಪ್ರಮುಖವೆನಿಸಿದೆ.

ಐಪಿಎಲ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕಿಂಗ್ಸ್ 11 ಪಂಜಾಬ್, ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಕಲೆ ಹಾಕಿದೆ. ಚೆನ್ನೈ ಸೂಪರ್ ಕಿಂಗ್ಸ್ 13ರಲ್ಲಿ 5ರಲ್ಲಿ ಗೆದ್ದು 10 ಪಾಯಿಂಟ್ಸ್‌ ಗಳಿಸಿದೆ. ಪ್ಲೇ ಆಫ್‌ ಸಾಧ್ಯತೆ ಉಳಿಸಿಕೊಳ್ಳಬೇಕಾದರೆ ಇಂದು ಪಂಜಾಬ್‌ಗೆ ಗೆಲ್ಲಲೇ ಬೇಕಿದೆ.

ಕಿಂಗ್ಸ್ 11 ಪಂಜಾಬ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಇಂದು 3.30 pmಗೆ ಆರಂಭಗೊಂಡರೆ, 3 pmಗೆ ಟಾಸ್ ನಡೆಯಲಿದೆ.

ಹವಾಮಾನ ವರದಿ

ಹವಾಮಾನ ವರದಿ

ಪಂಜಾಬ್-ಚೆನ್ನೈ ಪಂದ್ಯ ನಡೆಯುವ ದಿನ ಅಬುಧಾಬಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರೀ ಸೆಲ್ಶಿಯಸ್ ಇದ್ದರೆ, ಕನಿಷ್ಠ ತಾಪಮಾನ 24 ಡಿಗ್ರೀ ಸೆಲ್ಶಿಯಸ್ ಇರಲಿದೆ. ಉಳಿದ ದಿನಗಳಿಗೆ ಹೋಲಿಸಿದರೆ ಇಂದು ಸ್ವಲ್ಪ ಕಡಿಮೆ ಶೆಖೆ ಇರಲಿದೆ. ರಾತ್ರಿ ವೇಳೆ ಮಂಜಿನ ಸಾಧ್ಯತೆ ಹೆಚ್ಚಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಈವರೆಗೆ ನಡೆದ ಪಂದ್ಯಗಳಲ್ಲಿ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಧ್ಯಾಹ್ನ ಒಟ್ಟು ನಾಲ್ಕು ಪಂದ್ಯಗಳು ನಡೆದಿವೆ. ಇದರಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಟೀಮ್ ಗೆದ್ದಿದೆ. ರಾತ್ರಿ ನಡೆದ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಅಂದರೆ ಇಲ್ಲಿ ಇಬ್ಬನಿಯ ಅಂಶ ಪ್ರಮುಖ ಪಾತ್ರ ವಹಿಸಿದ್ದನ್ನು ನಾವು ಗಮನಿಸಬಹುದು.

ಚೆನ್ನೈ ಸಂಭಾವ್ಯ ತಂಡ

ಚೆನ್ನೈ ಸಂಭಾವ್ಯ ತಂಡ

ಋತುರಾಜ್ ಗಾಯಕವಾಡ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ, ಎನ್ ಜಗದೀಸನ್, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಮಿಚೆಲ್ ಸಾಂಟ್ನರ್, ಕರ್ಣ್ ಶರ್ಮಾ / ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಲುಂಗಿ ಎನ್‌ಜಿಡಿ.

ಪಂಜಾಬ್ ಸಂಬಾವ್ಯ ತಂಡ

ಪಂಜಾಬ್ ಸಂಬಾವ್ಯ ತಂಡ

ಕೆ.ಎಲ್. ರಾಹುಲ್, ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

Story first published: Sunday, November 1, 2020, 9:49 [IST]
Other articles published on Nov 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+