ಐಪಿಎಲ್ 2020: ಬೆಂಗಳೂರು vs ಡೆಲ್ಲಿ: ನಿರ್ಣಾಯಕ ಪಂದ್ಯದ ಸಂಪೂರ್ಣ ಮಾಹಿತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ನೀಡಿದ ಉತ್ತಮ ಪ್ರದರ್ಶನದ ಹೊರತಾಗಿಯೂ ಲೀಗ್ ಹಂತದ ಅಂತಿಮ ಪಂದ್ಯದ ವರೆಗೂ ಟಿಕೆಟ್ ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಎರಡೂ ತಂಡಗಳಿಗೂ ಬಹುಮುಖ್ಯವಾಗಿದೆ. ಟೂರ್ನಿಯ 55ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಯಾವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಎರಡು ಪಂದ್ಯಗಳಿಗೂ ಈ ಪಂದ್ಯದ ಗೆಲುವು ಮುಖ್ಯವಾಗಿರುವ ಕಾರಣ ಜಿದ್ದಾಜಿದ್ದಿಯ ಕಾದಾಟವನ್ನು ನಿರೀಕ್ಷಿಸಲಾಗಿದೆ.

ಪಿಚ್ ರಿಪೋರ್ಟ್
ಯುಎಇನ ಉಳಿದೆರಡು ಕ್ರೀಡಾಂಗಣಗಳ ಪಿಚ್‌ಗಳಿಗೆ ಹೋಲಿಸಿದರೆ ಅಬುದಾಭಿಯ ಪಿಚ್ ಹೆಚ್ಚು ನಿಧಾನಗತಿಯನ್ನು ಹೊಂದಿದೆ. ಹೊಸ ಚೆಂಡಿನಲ್ಲಿ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಟೂರ್ನಿಯ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಈ ಪಿಚ್ ಹೆಚ್ಚಿನ ಸಹಕಾರಿಯನ್ನು ನೀಡಿತ್ತು. ಆದರೆ ಟೂರ್ನಿ ಮುಂದುವರಿಯುತ್ತಿರುವಂತೆ ಅದೇ ಪರಿಸ್ಥಿತಿಯನ್ನು ಉಳಿಸಿಕೊಂಡಿಲ್ಲ. ಬೌಲರ್‌ಗಳು ಕೂಡ ಹೆಚ್ಚಿನ ಯಶಸ್ಸು ಪಡೆಯುತ್ತಿದ್ದಾರೆ.

ಹೆಡ್ ಟು ಹೆಡ್
ಈ ಎರಡು ತಂಡಗಳ ಹೆಡ್ ಟು ಹೆಡ್ ಕಾದಾಟವೂ ಕುತೂಹಲಕಾರಿಯಾಗಿದೆ. 24 ಪಂದ್ಯಗಳಲ್ಲಿ ಈ ತಂಡಗಳು ಮುಖಾಮುಖಿಯಾಗಿದ್ದು ಬೆಂಗಳೂರು 14 ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಂಡಿದೆ. 9 ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಾಸ್ ಅಯ್ಯರ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮಿಯರ್, ಹರ್ಷಲ್ ಪಟೇಲ್, ಕಗಿಸೊ ರಬಡಾ, ಆಕ್ಸಾರ್ ಪಟೇಲ್, ಆರ್ ಅಶ್ವಿನ್, ಅನ್ರಿಚ್ ನಾರ್ಟ್ಜೆ.

ಆರ್‌ಸಿಬಿ ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಗುರ್ಕೀರತ್ ಸಿಂಗ್ / ಶಿವಮ್ ದುಬೆ, ಕ್ರಿಸ್ ಮೋರಿಸ್, ಇಸುರು ಉದಾನಾ / ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications