ಲೀಗ್ ಕೊನೇ ಪಂದ್ಯದಲ್ಲಿ ಮುಂಬೈ-ಹೈದರಾಬಾದ್: ಪ್ರಮುಖ ಮಾಹಿತಿ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಲೀಗ್ ಹಂತದ ಕೊನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 3) ನಡೆಯಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಇಂದು ಸನ್ ರೈಸರ್ಸ್ ಪಾಲಿಗೆ ಮಾಡು ಇಲ್ಲವೆ ಮಡಿ ಪಂದ್ಯ. ಸೋತರೆ ಎಸ್‌ಆರ್‌ಎಚ್ ಪ್ಲೇ ಆಫ್ ಅವಕಾಶ ಕಳೆದುಕೊಳ್ಳಲಿದೆ. ಗೆದ್ದರೆ, ಪ್ಲೇ ಆಫ್‌ಗೆ ಪ್ರವೇಶಿಸಲಿದೆ.
ಆಡಿರುವ 13 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್, 18 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲನೇ ಸ್ಥಾನದಲ್ಲಿದೆ. 13ರಲ್ಲಿ 6 ಪಂದ್ಯಗಳನ್ನು ಜಯಿಸಿರುವ ಸನ್ ರೈಸರ್ಸ್ ಹೈದರಾಬಾದ್ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಆದರೆ ಸನ್ ರೈಸರ್ಸ್ ನೆಟ್ ರನ್‌ರೇಟ್ ಚೆನ್ನಾಗಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದರೆ ಪ್ಲೇ ಆಫ್‌ಗೆ ಹೋಗುವ ಅವಕಾಶ ಹೆಚ್ಚಿದೆ.

ಹವಾಮಾನ ವರದಿ
ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕದನ ನಡೆಯುವ ಮಂಗಳವಾರ ಶಾರ್ಜಾದಲ್ಲಿ ಗರಿಷ್ಠ 33 ಡಿಗ್ರೀ ಸೆಲ್ಶಿಯಸ್, ಕನಿಷ್ಠ 22 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಪಂದ್ಯ 7.30 pmಗೆ ಆರಂಭವಾಗಲಿದ್ದು, 7 pmಗೆ ಟಾಸ್ ನಡೆಯಲಿದೆ.

ಪಿಚ್ ರಿಪೋರ್ಟ್
ಟೂರ್ನಿ ಆರಂಭದಲ್ಲಿ ಅತೀ ಹೆಚ್ಚು ರನ್ ನೀಡುತ್ತಿದ್ದ ಶಾರ್ಜಾ ಸ್ಟೇಡಿಯಂ ಈಗೀಗ ಸ್ಲೋ ಪಿಚ್ ಆಗಿ ಬದಲಾಗುತ್ತಿದೆ. ಆರಂಭದ ಪಂದ್ಯಗಳಲ್ಲಿ ದಾಖಲಾಗುತ್ತಿದ್ದ 200+ ರನ್ ಈಗ 160-180 ರನ್ ಬಂದರೆ ದೊಡ್ಡದು ಎಂಬಂತಾಗಿದೆ. ಹಿಂದಿನ ಪಂದ್ಯದಲ್ಲಿ ಇದೇ ಸ್ಟೇಡಿಯಂನಲ್ಲಿ ಆರ್‌ಸಿಬಿ ಕೇವಲ 120 ರನ್ ಬಾರಿಸಿತ್ತು. ಸಿಎಸ್‌ಕೆ ತಂಡ ಮುಂಬೈ ವಿರುದ್ಧ ಬರೀ 114 ರನ್ ಬಾರಿಸಿ ಶರಣಾಗಿತ್ತು. ಹೀಗಾಗಿ ಎರಡೂ ತಂಡಗಳು ಎಚ್ಚರಿಕೆ ಆಟವಾಡಬೇಕಿದೆ.

ಮುಂಬೈ ಸಂಭಾವ್ಯ ತಂಡ
ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್/ಕ್ರಿಸ್ ಲಿನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್ (ಸಿ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಧವಲ್ ಕುಲಕರ್ಣಿ, ಮಿಚೆಲ್ ಮೆಕ್ಲೆನಾಗನ್.

ಹೈದರಾಬಾದ್ ಸಂಭಾವ್ಯ ತಂಡ
ಡೇವಿಡ್ ವಾರ್ನರ್ (ಸಿ), ವೃದ್ಧಿಮಾನ್ ಸಹಾ (ವಿಕೆ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications