
ಬೆಂಗಳೂರು: ಡಿಜಿಟಲ್ ಹೆಲ್ತ್‌ಕೇರ್ ವೇದಿಕೆ ಮೆಡಿಬಡ್ಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧಿಕೃತ ಪಾಲುದಾರನಾಗಿರಲಿದೆ. ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಹೆಲ್ತ್ ಕೇರ್ ಪಾರ್ಟ್ನರ್ ಆಗಿ ಮೆಡಿಬಡ್ಡಿ ಆರ್‌ಸಿಬಿ ಜೊತೆಗಿರಲಿದೆ. ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ.
ಮೆಡಿಬಡ್ಡಿ-ಡಾಕ್ಸ್‌ಆ್ಯಪ್‌ನ ಸಹ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಕಣ್ಣನ್, 'ಈ ಪಾಲುದಾರಿಕೆಯಿಂದ ಆರೋಗ್ಯವನ್ನು ಕಾಪಾಡೋದು ಮತ್ತು ಆರೋಗ್ಯವಾಗಿರುವ ಬಗ್ಗೆ ಸಂದೇಶ ಪಸರಿಸಬಹುದು. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ನಮ್ಮ ಪ್ರಯತ್ನಕ್ಕೆ ಇದು ಸ್ಥಿರವಾಗಿದೆ. ಒಳ್ಳೆಯ ಆರೋಗ್ಯವಿರಲಿ ಎಂದು ನಾವು ತಂಡಕ್ಕೆ ಹಾರೈಸುತ್ತೇವೆ,' ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧ್ಯಕ್ಷ ಸಂಜೀವ್ ಚಾವ್ಲಾ ಮಾತನಾಡಿ, 'ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡಿಜಿಟಲ್ ಹೆಲ್ತ್‌ಕೇರ್ ಪಾರ್ಟ್ನರ್ ಆಗಿ ಮೆಡಿಬಡ್ಡಿ ಜೊತೆಯಾಗಿರುವುದಕ್ಕೆ ನಮಗೆ ಖುಷಿಯಾಗಿದೆ. ಈಗಿನ ಈ ಪರಿಸ್ಥಿತಿಯಲ್ಲಿ ಆರೋಗ್ಯದ ಪ್ರಾಮುಖ್ಯತೆಯನ್ನು ಸಂದೇಶ ಸಾರೋದು ನಮ್ಮ ಉದ್ದೇಶ,' ಎಂದರು.
ಸೆಪ್ಟೆಂಬರ್ 19ರಿಂದ ಆರಂಭವಾಗುವ ಐಪಿಎಲ್ ಟೂರ್ನಿ ನವೆಂಬರ್ 10ಕ್ಕೆ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಿದರೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ 21ರಂದು ನಡೆಯಲಿದೆ.