Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹೈಲೈಟ್ಸ್: ರಾಯುಡು-ಪ್ಲೆಸಿಸ್ ಸಾಹಸ, ಮುಂಬೈ ಮಣಿಸಿದ ಚೆನ್ನೈ

IPL 2020: MI vs CSK Match 1 highlights in kannada

ಅಬುಧಾಬಿ: ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 19) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಜಯ ಸಾಧಿಸಿದೆ. ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟದಿಂದಾಗಿ ಸಿಎಸ್‌ಕೆ ಮೊದಲ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 12, ಕ್ವಿಂಟನ್ ಡಿ ಕಾಕ್ 33, ಸೂರ್ಯಕುಮಾರ್ ಯಾದವ್ 17, ಸೌರಭ್ ತಿವಾರಿ 42, ಹಾರ್ದಿಕ್ ಪಾಂಡ್ಯ 14, ಕೀರನ್ ಪೊಲಾರ್ಡ್ 18, ಜೇಮ್ಸ್ ಪ್ಯಾಟಿನ್ಸನ್ 11 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 162 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಫಾಫ್ ಡು ಪ್ಲೆಸಿಸ್ 58 (44 ಎಸೆತ), ಅಂಬಾಟಿ ರಾಯುಡು 71 (48 ಎಸೆತ), ರವೀಂದ್ರ ಜಡೇಜಾ 10, ಸ್ಯಾಮ್ ಕರನ್ 18 ರನ್ ಕೊಡುಗೆಯೊಂದಿಗೆ 19.2 ಓವರ್‌ಗೆ 5 ವಿಕೆಟ್ ಕಳೆದು 166 ರನ್ ಗಳಿಸಿತು. ರಾಯುಡು ಪಂದ್ಯಶ್ರೇಷ್ಠರೆನಿಸಿದರು.

ಮುಂಬೈ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಹಾರ್ 2, ಲುಂಗಿ ಎನ್‌ಗಿಡಿ 3, ರವೀಂದ್ರ ಜಡೇಜಾ 2 ವಿಕೆಟ್‌ನಿಂದ ಗಮನ ಸೆಳೆದರೆ, ಚೆನ್ನೈ ಇನ್ನಿಂಗ್ಸ್‌ನಲ್ಲಿ ಮುಂಬೈನ ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ಜಸ್‌ಪ್ರೀತ್‌ ಬೂಮ್ರಾ, ಕೃನಾಲ್ ಪಾಂಡ್ಯ, ರಾಹುಲ್ ಚಹಾರ್ ತಲಾ 1 ವಿಕೆಟ್ ಪಡೆದರು.

Story first published: Saturday, September 19, 2020, 23:49 [IST]
Other articles published on Sep 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+