ಅಲ್ಲ ಗುರೂ ಹಾರ್ದಿಕ್ ಪಾಂಡ್ಯ, ಸ್ವಲ್ಪನಾದ್ರೂ ಸೀರಿಯಸ್‌ನೆಸ್ ಬೇಡ್ವಾ?

ಐಪಿಎಲ್ - 13ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ, ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ದ ಸುಲಭ ಗೆಲುವನ್ನು ಸಾಧಿಸಿದೆ.
ಆ ಮೂಲಕ, ಮುಂಬೈ ತಂಡ ಸರಣಿಯಲ್ಲಿ ಮೊದಲ ಗೆಲುವನ್ನು ಸಂಪಾದಿಸಿದೆ. ನಾಯಕ ರೋಹಿತ್ ಭರ್ಜರಿ ಆಟ ಪ್ರದರ್ಶಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಪಂದ್ಯದಲ್ಲಿ ಮುಂಬೈ ತಂಡ, ಸಿಎಸ್ಕೆ ವಿರುದ್ದ ಸೋಲು ಅನುಭವಿಸಿತ್ತು.
ಕೋಲ್ಕತ್ತಾ ವಿರುದ್ದದ ಪಂದ್ಯದಲ್ಲಿ ಸದಾ ಸುದ್ದಿಯಲ್ಲಿರುವ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಹದಿಮೂರು ಬಾಲ್ ನಲ್ಲಿ ಹದಿನೆಂಟ್ ರನ್ ಹೊಡೆದು ಔಟ್ ಆದರು. ಆದರೆ ಪಾಂಡ್ಯ ಔಟ್ ಆದ ರೀತಿ ವ್ಯಾಪಕ ಟ್ರೋಲ್ ಗೆ ಕಾರಣವಾಗಿದೆ.
ಕ್ರಿಕೆಟ್ ನಲ್ಲಿ ತೀರಾ ಅಪರೂಪ ಎನ್ನುವಂತೆ ಪಾಂಡ್ಯ ಹಿಟ್ ವಿಕೆಟ್ ಆಗುವ ಮೂಲಕ ಔಟ್ ಆಗಿದ್ದಾರೆ. ಕೋಲ್ಕತ್ತಾ ತಂಡದ ಆಂಡ್ರ್ಯೂ ರಸೆಲ್ ಅವರ ಬೌಲ್ ಅನ್ನು ಬ್ಯಾಕ್ ಫೂಟ್ ನಲ್ಲಿ ಆಡಲು ಹೋಗಿ ಪಾಂಡ್ಯ ವಿಕೆಟ್ ಒಪ್ಪಿಸಿದ್ದರು.

ಹಿಟ್ ವಿಕೆಟ್ ಮೂಲಕ ಹಾರ್ದಿಕ್ ಪಾಂಡ್ಯ ಔಟ್
ರಸೆಲ್ ಬೌಲಿಂಗ್ ನಲ್ಲಿ ಬ್ಯಾಕ್ ಫೂಟ್ ನಲ್ಲಿ ಬಂದು ಕಟ್ ಮಾಡಲು ಹೋಗಿ, ಪಾಂಡ್ಯ ಆಫ್ ಸ್ಟಂಪ್ ಮೇಲೆ ಬ್ಯಾಟ್ ತಗಲಿಸಿ, ಹಿಟ್ ವಿಕೆಟ್ ಮೂಲಕ ಔಟ್ ಆಗಿದ್ದಾರೆ. ಹದಿಮೂರು ಬಾಲ್ ನಲ್ಲಿ , ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಯ ಮೂಲಕ, ಹದಿನೆಂಟ್ ರನ್ ಗಳಿಸಿ ಪಾಂಡ್ಯ ಔಟ್ ಆಗಿದ್ದರು. (ಚಿತ್ರ:ಪಿಟಿಐ)

#HardikPandya ಹ್ಯಾಷ್ ಟ್ಯಾಗ್ ಟ್ರೆಂಡಿಂಗ್
ಆದರೆ, ಈ ರೀತಿ ಔಟ್ ಆಗುವ ಮೂಲಕ, ಇದಕ್ಕೆ ಯಾವುದೇ ವಿಷಾದವಿಲ್ಲದೇ, ನಗುತ್ತಲೇ ಪಾಂಡ್ಯ ಪೆವಲಿಯನ್ ಗೆ ತೆರಳಿದ್ದು, ವ್ಯಾಪಕ ಟ್ರೋಲ್ ಗೆ ಗುರಿಯಾಗುವಂತೆ ಮಾಡಿದೆ. ಟ್ವಿಟ್ಟರ್ ನಲ್ಲಿ #HardikPandya ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ನೆಟ್ಟಿಗರು, ಪಾಂಡ್ಯನನ್ನು ಸಖತ್ ಕಾಲೆಳೆದಿದ್ದಾರೆ. (ಚಿತ್ರ:ಟ್ವಿಟ್ಟರ್)

ಸ್ಟಂಪ್ ನಲ್ಲಿ ಲೈಟ್ ಬರುತ್ತೋ ಇಲ್ಲವೋ ಎಂದು ಪಾಂಡ್ಯ ಪರೀಕ್ಷಿಸುತ್ತಿದ್ದಾರೆ
ಪಾಂಡ್ಯ ಜೊತೆ ಆತ್ಮನಿರ್ಭರ್, ರಾಹುಲ್ ಗಾಂಧಿ, ಬಿಡದಿ ನಿತ್ಯಾನಂದ ಮುಂತಾದ ವಿಚಾರಗಳನ್ನೆಲ್ಲಾ ತುಲನೆ ಮಾಡಿ ಲೇವಡಿ ಮಾಡಲಾಗುತ್ತಿದೆ. 'ನಿಮ್ಮ ಮುಠಾಳತನಕ್ಕೆ ನನ್ನದೊಂದು ಸಲಾಂ', 'ಸ್ಟಂಪ್ ನಲ್ಲಿ ಲೈಟ್ ಬರುತ್ತೋ ಇಲ್ಲವೋ ಎಂದು ಪಾಂಡ್ಯ ಪರೀಕ್ಷಿಸುತ್ತಿದ್ದಾರೆ'.. ಹೀಗೆ ಹಲವು ಮೇಮ್ಸ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. (ಚಿತ್ರ:ಟ್ವಿಟ್ಟರ್)
ಕಾಫಿ ಶೋನಲ್ಲಿ ಒಮ್ಮೆ ಹಿಟ್ ವಿಕೆಟ್ ಆಗಿದ್ದರು
'ಪಾಂಡ್ಯ ಹಿಟ್ ವಿಕೆಟ್ ಆಗುತ್ತಿರುವುದು ಇದೇನು ಮೊದಲಲ್ಲ. ಕಾಫಿ ಶೋನಲ್ಲಿ ಒಮ್ಮೆ ಹಿಟ್ ವಿಕೆಟ್ ಆಗಿದ್ದರು', 'ಅಸಲಿಗೆ ನಾನು ಏನೂ ಮಾಡೇ ಇಲ್ಲ, ಆದರೂ, ಸಂಬಳ ಬರುತ್ತಿದೆ'ಎಂದು ರಸೆಲ್ ಫೋಟೋ ಹಾಕಿ, ಪಾಂಡ್ಯ ಕಾಲು ಎಳೆಯುವ ಟ್ವೀಟ್ ಗಳು ಹರಿದಾಡುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications