ಐಪಿಎಲ್ 2020: ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಮುರಿದ ಮುಂಬೈ ಇಂಡಿಯನ್ಸ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 49 ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ ಐಪಿಎಲ್‌ನಲ್ಲಿದ್ದ ಕೆಟ್ಟ ದಾಖಲೆಯೊಂದನ್ನು ರೋಹಿತ್ ಶರ್ಮಾ ನಾಯಕತ್ವದ ಎಂಐ ಈ ಬಾರಿ ಸರಿಗಟ್ಟಿದೆ.
2014ರ ಆವೃತ್ತಿಯಿಂದ ಈಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂದೇ ಒಂದು ಪಂದ್ಯ ಗೆಲ್ಲದೆ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡಿತ್ತು. ಆದರೆ ಈ 13ನೇ ಐಪಿಎಲ್ ಆವೃತ್ತಿಯಲ್ಲಿ ಆಡಿದ 2ನೇ ಪಂದ್ಯದಲ್ಲಿ ಮುಂಬೈ ವಿಜಯದ ನಗೆ ಬೀರಿದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 5ನೇ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಭರ್ಜರಿ ಬ್ಯಾಟಿಂಗ್ ನೀಡಿದರು. ಶರ್ಮಾ 6 ಸಿಕ್ಸರ್, 4 ಫೋರ್ ಸೇರಿ 54 ಎಸೆತಗಳಲ್ಲಿ 80 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ರೋಹಿತ್ 80, ಸೂರ್ಯಕುಮಾರ್ ಯಾದವ್ 47, ಸೌರಭ್ ತಿವಾರಿ 21, ಹಾರ್ದಿಕ್ ಪಾಂಡ್ಯ 18, ಕೀರನ್ ಪೊಲಾರ್ಡ್ 13 ರನ್ ಸೇರ್ಪಡೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 195 ರನ್ ಪೇರಿಸಿತ್ತು.
ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ದಿನೇಶ್ ಕಾರ್ತಿಕ್ 30, ನಿತೀಶ್ ರಾಣಾ 24, ಪ್ಯಾಟ್ ಕಮಿನ್ಸ್ 33 ಗಮನಾರ್ಹ ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿ ತಲೆ ಬಾಗಿತು. ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications