ರಾಯಲ್ ಚಾಲೆಂಜರ್ಸ್‌ಗೆ ಗೆಲುವು: ಅನುಷ್ಕಾ ಶರ್ಮಾ ಬಸುರಿ ಬಯಕೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯದ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಗರ್ಭಿಣಿ ಹೆಂಗಸಿಗೆ ಪಂದ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು ಎಂದು ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇವದತ್ ಪಡಿಕ್ಕಲ್ 54 (40 ಎಸೆತ), ಆ್ಯರನ್ ಫಿಂಚ್ 52 (35 ಎಸೆತ), ಎಬಿ ಡಿವಿಲಿಯರ್ಸ್ 55 (24 ಎಸೆತ), ಶಿವಂ ದೂಬೆ 27 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 201 ರನ್ ಕಲೆ ಹಾಕಿತ್ತು.
ಚೇಸಿಂಗ್‌ಗೆ ಇಳಿದ ಮುಂಬೈ ಕೂಡ ರೋಹಿತ್ ಶರ್ಮಾ 8, ಹಾರ್ದಿಕ್ ಪಾಂಡ್ಯ 15, ಇಶಾನ್ ಕಿಶನ್ 99, ಕೀರನ್ ಪೊಲಾರ್ಡ್ 60 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಆದರೆ ಸೂಪರ್ ಓವರ್‌ನಲ್ಲಿ ಮುಂಬೈ 7 ರನ್ ಬಾರಿಸಿದ್ದರಿಂದ ಬೆಂಗಳೂರು 8 ರನ್ ಬಾರಿಸಿ ಪಂದ್ಯ ಗೆದ್ದಿತು.

ಈ ಸೂಪರ್ ಓವರ್ ಪಂದ್ಯದ ರೋಚಕ ಕ್ಷಣಗಳ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿರುವ ಅನುಷ್ಕಾ ಶರ್ಮಾ, 'ಗರ್ಭಿಣಿಗೆ ತುಂಬಾ ರೋಮಾಂಚಕಾರಿ ಪಂದ್ಯವಾಗಿತ್ತು. ಇದು ಎಂಥಾ ಅದ್ಭುತ ತಂಡ @ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂದು ಬರೆದುಕೊಂಡಿದ್ದಾರೆ. ವಿರಾಟ್-ಅನುಷ್ಕಾ ಬರುವ ಜನವರಿಯಲ್ಲಿ ಅಪ್ಪ-ಅಮ್ಮ ಅನ್ನಿಸಿಕೊಳ್ಳುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications