ಮುಂಬೈ ಇಂಡಿಯನ್ಸ್ vs ಎಂಎಸ್ ಧೋನಿ : ಐಪಿಎಲ್ ಫೈನಲ್ ಇತಿಹಾಸದಲ್ಲಿ ಕುತೂಹಲಕಾರಿ ಸಂಗತಿ

ಡೆಲ್ಲಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯವನ್ನು ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ 6ನೇ ಬಾರಿಗೆ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಹಾಲಿ ಚಾಂಪಿಯನ್ ಯಾಗಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲೂ ಭರ್ಜರಿ ಪ್ರದರ್ಶನವನ್ನು ನೀಡುತ್ತಾ ಬಂದು ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿದೆ.
ಆದರೆ ಕುತೂಹಲಕಾರಿ ಸಂಗತಿ ಮತ್ತೊಂದಿದೆ. ಮುಂಬೈ ಇಂಡಿಯನ್ಸ್ ಆರು ಬಾರಿ ಫೈನಲ್‌ಗೆ ಪ್ರವೇಶವನ್ನು ಪಡೆದಾಗಲೂ ಎಂಎಸ್ ಧೋನಿ ಎದುರಾಳಿ ತಂಡದಲ್ಲಿದ್ದರು ಎಂಬುದು. ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಧೋನಿ ಇಲ್ಲದ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಎಂಎಸ್ ಧೋನಿ ಹಣಾಹಣಿಯ ಹಿಂದಿನ ಕುತೂಹಲಕಾರಿ ಸಂಗತಿಯನ್ನು ಮುಂದೆ ಓದಿ..

ಫೈನಲ್‌ನಲ್ಲಿ 4 ಬಾರಿ ಚೆನ್ನೈ ಎದುರಾಳಿ
ಮುಂಬೈ ಇಂಡಿಯನ್ಸ್ ಈ ಹಿಂದಿನ ಆವೃತ್ತಿಯವರೆಗೆ ಐದು ಬಾರಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಈ ಐದು ಫೈನಲ್‌ಗಳಲ್ಲಿ ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಮುಂಬೈ ಇಂಡಿಯನ್ಸ್‌ಗೆ ಎದುರಾಳಿಯಾಗಿತ್ತು. ಈ ಕಾದಾಟದಲ್ಲಿ ಮುಂಬೈ ಉತ್ತಮ ದಾಖಲೆಯನ್ನು ಹೊಂದಿದೆ.

3 ಗೆಲುವು ಸಾಧಿಸಿರುವ ಮುಂಬೈ
ಐಪಿಎಲ್ ಪೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅತಿ ಹೆಚ್ಚು ಬಾರಿ ಎದುರಿಸಿದ್ದು ಮಾತ್ರವಲ್ಲ ಗೆಲುವಿನಲ್ಲೂ ಅದ್ಭುತ ಯಶಸ್ಸು ಪಡೆದುಕೊಂಡಿದೆ. 2010ರಲ್ಲಿ ಚೆನ್ನೈ ಹಾಗೂ ಮುಂಬೈ ಮೊದಲ ಬಾರಿಗೆ ಫೈನಲ್‌ನಲ್ಲಿ ಮುಖಾಮುಖಿಯಾದಾಗ ಮಾತ್ರವೇ ಮುಂಬೈ ಸೋಲು ಕಂಡಿದೆ. ಉಳಿದ ಮೂರು ಫೈನಲ್ ಪಂದ್ಯಗಳಲ್ಲಿ ಮುಂಬೈ ಗೆಲುವನ್ನು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಒಂದು ಎದುರಾಳಿ ರೈಸಿಂಗ್‌ಪುಣೆ ಸೂಪರ್‌ಜೈಂಟ್
ಮುಂಬೈ ಆಡಿದ ಐದು ಫೈನಲ್‌ಗಳಲ್ಲಿ ನಾಲ್ಕು ಚೆನ್ನೈ ವಿರುದ್ಧವಾದರೆ ಉಳಿದ ಒಂದು ಫೈನಲ್ ಪಂದ್ಯವನ್ನು ರೈಸಿಂಗ್‌ಪುಣೆ ಸೂಪರ್ ಜೈಂಟ್ ವಿರುದ್ಧ ಆಡಿದೆ. ಕಾಕತಾಳೀಯವೆಂದರೆ ಸಿಎಸ್‌ಕೆ ನಿಶೇಧಗೊಂಡಿದ್ದ ಈ ಟೂರ್ನಿಯಲ್ಲಿ ಧೋನಿ ಪುಣೆ ತಂಡವನ್ನು ಪ್ರತಿನಿಧಿಸುತ್ತಿದ್ದರು. ಹೀಗಾಗಿ ಈ ಫೈನಲ್ ಪಂದ್ಯದಲ್ಲೂ ಧೋನಿ ಮುಂಬೈ ತಂಡದ ಎದುರಾಳಿಯಾಗಿ ಕಣಕ್ಕಿಳಿದಿದ್ದರು.

2013ರ ಬಳಿಕ ಮುಂಬೈ ಪಾರುಪತ್ಯ
ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ 8 ಬಾರಿ ಫೈನಲ್ ಪ್ರವೇಶ ಪಡೆದು ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಎನಿಸಿಕೊಂಡಿದೆ. ಆದರೆ 2013ರ ಆವೃತ್ತಿಯ ಬಳಿಕ ಮುಂಬೈ ಅದ್ಭುತವಾದ ದಾಖಲೆಯನ್ನು ಹೊಂದಿದೆ. 2013ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಎನಿಸಿದ ಮುಂಬೈ ಬಳಿಕ ಪ್ರತಿ ಎರಡು ವರ್ಷಕ್ಕೊಂದರಂತೆ ಚಾಂಪಿಯನ್ ಪಟ್ಟಕ್ಕೇರುತ್ತಾ ಬಂದಿದೆ. 2013, 2015, 2017 ಹಾಗೂ 2019ರಲ್ಲಿ ಮುಂಬೈ ಪೈನಲ್ ಪ್ರವೇಶ ಮಾಡಿದ್ದು ಮಾತ್ರವಲ್ಲದೆ ಎಲ್ಲದರಲ್ಲೂ ಗೆಲುವು ಸಾಧಿಸಿದೆ. ಈಗ ಇದೇ ಮೊದಲ ಬಾರಿಗೆ ಸತತ ಎರಡನೇ ವರ್ಷ ಫೈನಲ್ ಪ್ರವೇಶ ಪಡೆದು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿದೆ.

ಫೈನಲ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಮುಂಬೈ ಅಜೇಯ
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ರೊಹಿತ್ ಶರ್ಮಾ ವಹಿಸಿಕೊಂಡ ಬಳಿಕ ತಂಡದ ಗತಿಯೇ ಬದಲಾಗಿದೆ. ರೋಹಿತ್ ನೇತೃತ್ವದ ಮುಂಬೈ ತಂಡ ನಾಲ್ಕು ಬಾರಿ ಫೈನಲ್‌ಗೇರಿದ್ದು ನಾಲ್ಕರಲ್ಲೂ ಗೆಲುವು ಸಾಧಿಸಿದ ಇತಿಹಾಸವಿದೆ. ಇದು ಮುಂಬೈ ತಂಡಕ್ಕೆ ಮತ್ತೊಮ್ಮೆ ಕಪ್ ಗೆಲ್ಲಲು ಪ್ರೇರಣೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications