For Quick Alerts
ALLOW NOTIFICATIONS  
For Daily Alerts
 

ಪಡಿಕ್ಕಲ್ ಆಟಕ್ಕೆ ತಲೆದೂಗಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

IPL 2020: Michael Vaughan praises Devdutt Padikkal

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ 163 ರನ್‌ಗಳ ಸವಾಲಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ಆಟಗಾರರೆಲ್ಲಾ ಮುಂಬೈ ಇಂಡಿಯನ್ಸ್ ದಾಳಿಯನ್ನು ಎದುರಿಸಲು ವಿಫಲರಾದರೂ ಕೂಡ 20ರ ಹರೆಯದ ಪಡಿಕ್ಕಲ್ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಾ ರನ್ ಹೆಚ್ಚಿಸಲು ಕಾರಣರಾದರು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನಿಡುತ್ತಾ ಬಂದಿರುವ ಪಡಿಕ್ಕಲ್ ಇಂದಿನ ಆಟಕ್ಕೆ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ.

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ದೇವದತ್ವ ಪಡಿಕ್ಕಲ್ ಆಟಕ್ಕೆ ಮನಸೋತಿದ್ದಾರೆ. ಪಡಿಕ್ಕಲ್ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿರುವ ಮೈಕಲ್ ವಾನ್ "ಭಾರತೀಯ ಕ್ರಿಕೆಟ್ ತಂಡವನ್ನು ಸುದೀರ್ಘ ಕಾಲ ಆಡಬಲ್ಲ ರೀತಿಯ ಕ್ರಿಕೆಟಿಗನಂತೆ ದೇವದತ್ ಪಡಿಕ್ಕಲ್ ಕಾಣಿಸುತ್ತಿದ್ದಾರೆ. ನಂಬಲಸಾದ್ಯವಾದ ಆಲ್‌ರೌಂಡ್ ಪ್ರತಿಭೆ" ಎಂದು ಬರೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 74 ರನ್‌ಗಳನ್ನು ಬಾರಿಸಿದ್ದಾರೆ. 12 ಬೌಂಡರಿ ಹಾಗೂ 1 ಸಿಕ್ಸರ್ ಈ ಇನ್ನಿಂಗ್ಸ್‌ನಲ್ಲಿತ್ತು. ಟೂರ್ನಿಯಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದ್ದಾಗಲೂ ಪಡಿಕ್ಕಲ್ 54 ರನ್‌ಗಳನ್ನು ಬಾರಿಸಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ 12 ಪಂದ್ಯಗಳನ್ನು ಆಡಿರುವ ಪಡಿಕ್ಕಲ್ 4 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಟೂರ್ನಿಯಲ್ಲಿ 417 ರನ್ ಸಿಡಿಸಿರುವ ಯುವ ಆಟಗಾರ 34.74ರ ಸರಾಸರಿಯಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ಮೊದಲ ಆವೃತ್ತಿಯಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Story first published: Thursday, October 29, 2020, 9:41 [IST]
Other articles published on Oct 29, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+