ಐಪಿಎಲ್ ಮಧ್ಯದಲ್ಲೇ 5 ಸ್ಟಾರ್ ಭಾರತೀಯ ಕ್ರಿಕೆಟರ್ ವರ್ಗಾವಣೆ ಸಾಧ್ಯತೆ
ಐಪಿಎಲ್ 2020ರಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಕೆಲ ಹಿರಿಯ ಆಟಗಾರರಿಗೆ ಕಣಕ್ಕಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಐಪಿಎಲ್ ಸೀಸನ್ ಮಧ್ಯದಲ್ಲೇ ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರನ್ನು ತಂಡಗಳ ನಡುವೆ ಟ್ರೇಡ್ ಮಾಡಬಹುದಾಗಿದೆ.
ಸದ್ಯಕ್ಕೆ ಯಾವ ತಂಡವೂ ಈ ರೀತಿಯ ಮಿಡ್ ಸೀಸನ್ ಆಟಗಾರರ ವರ್ಗಾವಣೆಗೆ ಸಿದ್ಧವಾಗಿಲ್ಲ. ಸದ್ಯಕ್ಕೆ ನಿಯಮ ಪ್ರಕಾರ 7 ಪಂದ್ಯಗಳ ನಂತರ ಸೌಲಭ್ಯ ಲಭ್ಯವಾಗಲಿದೆ. ಭಾರತ ಐದು ಸ್ಟಾರ್ ಆಟಗಾರರ ವರ್ಗಾವಣೆ ಸಾಧ್ಯತೆ ಬಗ್ಗೆ ಇಲ್ಲಿದೆ ವರದಿ...

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಮಯಗಳು
* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ. * ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.

ಅಜಿಂಕ್ಯ ರಹಾನೆ
ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಪೃಥ್ವಿ-ಧವನ್ ಯಶಸ್ಸು ಕಾಣುತ್ತಿದ್ದು, ಅಜಿಂಕ್ಯ ರಹಾನೆಗೆ ಅವಕಾಶವೇ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಉತ್ತಮ ಆರಂಭಿಕ ಆಟಗಾರರ ಕೊರತೆ ಅನುಭವಿಸುತ್ತಿರುವ ಫ್ರಾಂಚೈಸಿಗಳು Mid-Season Transfer ಬಳಸಿಕೊಂಡು ರಹಾನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
ಐಪಿಎಲ್ 2020: ಭರ್ಜರಿ ಬೆಲೆಗೆ ಆರ್‌ಸಿಬಿ ಪಾಲಾದ ಟೈಮಲ್ ಮಿಲ್ಸ್
ಯಾವ ತಂಡಕ್ಕೆ: ತಂಡದಲ್ಲಿ ಸಂಪೂರ್ಣ ಬದಲಾವಣೆ ಬಯಸಿರುವ ಕಿಂಗ್ಸ್ ಎಲೆವನ್ ಪಂಜಾಬ್ ತಂಡವು ರಹಾನೆಯನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಖರೀದಿಸಬಹುದು. ಪಂಜಾಬ್ ಆರಂಭಿಕ ಆಟಗಾರರ ಕೊರತೆ ನೀಗಿಸಿಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟುವವರು ಇಲ್ಲ. ಹೀಗಾಗಿ ಅನುಭವಿ ಬ್ಯಾಟ್ಸ್ ಮನ್ ರಹಾನೆ ಬಲ ತುಂಬಬಹುದು ಎಂದು ಆಯ್ಕೆ ಮಾಡಿಕೊಳ್ಳಬಹುದು.

ಧವಳ್ ಕುಲಕರ್ಣಿ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೌಲಿಂಗ್ ಸಶಕ್ತವಾಗಿದ್ದು, ಧವಳ್ ಕುಲಕರ್ಣಿಗೆ ಸ್ಥಾನ ಸಿಗುವುದು ಕಷ್ಟವಾಗಿದೆ. ಜೇಮ್ಸ್ ಪ್ಯಾಟಿಸನ್, ಟ್ರೆಂಟ್ ಬೌಲ್ಟ್, ಬೂಮ್ರಾ ಅಲ್ಲದೆ ಪೊಲ್ಲಾರ್ಡ್ ಕೂಡಾ ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ. ಹೀಗಾಗಿ ಧವಳ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಯಾವ ತಂಡಕ್ಕೆ: ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಪಡೆಯಲ್ಲಿ ಜಯದೇವ್ ಉನದ್ಕತ್, ಅಂಕಿತ್ ರಜಪೂತ್ ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಜೊತೆಗೆ ಧವಳ್ ಕುಲಕರ್ಣಿ ಸೇರಿಕೊಂಡರೆ ಬಲ ಹೆಚ್ಚಿಸಿಕೊಳ್ಳಬಹುದು.

ಮಯಾಂಕ್ ಮಾರ್ಕಂಡೆ
ರಾಜಸ್ಥಾನದ ಆಟಗಾರ ಮಯಾಂಕ್ 2018ರಲ್ಲಿ ಸ್ಟಾರ್ ಬೌಲರ್ ಎನಿಸಿಕೊಂಡು ಟೀಂ ಇಂಡಿಯಾಕ್ಕೂ ಆಡಿದ್ದರು. ಆದರೆ ರಾಯಲ್ಸ್ ನಲ್ಲಿ ಆಡಲು ಅವಕಾಶ ಸಿಗುತ್ತಿಲ್ಲ. ಶ್ರೇಯಸ್ ಗೋಪಾಲ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚಬಹುದಾಗಿದ್ದು, ಅವರು ಪ್ರಥಮ ಆಯ್ಕೆಯಾಗಿದ್ದಾರೆ ಜೊತೆಗೆ ರಾಹುಲ್ ತೇವಾಟಿಯಾ ಕೂಡಾ ಇದ್ದಾರೆ.
ಯಾವ ತಂಡಕ್ಕೆ: ಕಿಂಗ್ಸ್ ಎಲೆವನ್ ಪಂಜಾಬ್
ಪಂಜಾಬ್ ತಂಡದಲ್ಲಿ ರವಿ ಬಿಷ್ನೋಯಿಗೆ ಸಾಥ್ ನೀಡಲು ಮಯಾಂಕ್ ಮಾರ್ಕಂಡೆ ಅವರನ್ನು ಕರೆ ತರಬಹುದು. ಇದರಿಂದ ಪಂಜಾಬ್ ಸ್ಪಿನ್ ಬಲವು ಹೆಚ್ಚಲಿದೆ.

ಆದಿತ್ಯ ತಾರೆ
ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಆದಿತ್ಯ ತಾರೆ ಅವರಿಗೆ ಅವಕಾಶ ಸಿಗುತ್ತಿಲ್ಲ. ಸೂರ್ಯಕುಮಾರ್ ಯಾದವ್ ಲಯಕ್ಕೆ ಮರಳಿದ್ದಾರೆ. ಇಶಾನ್ ಕಿಶಾನ್, ಸೌರಬ್ ತಿವಾರಿಗೆ ಅವಕಾಶ ಸಿಗುತ್ತಲೇ ಇದೆ.
ಯಾವ ತಂಡಗಳಿಗೆ: ಪಂಜಾಬ್, ರಾಜಸ್ಥಾನ, ಚೆನ್ನೈ
ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಿಕೊಳ್ಳಲು ಆದಿತ್ಯ ತಾರೆಯನ್ನು ಈ ಮೂವರು ತಂಡಗಳು ಬಯಸಬಹುದು. ರಾಯಲ್ಸ್ ತಂಡದಲ್ಲಿ ಉತ್ತಪ್ಪ, ಪರಾಗ್ ವಿಫಲರಾಗಿದ್ದಾರೆ. ಚೆನ್ನೈನಲ್ಲಿ ಕೇದಾರ್ ಜಾಧವ್, ಋತುರಾಜ್ ಉತ್ತಮ ಪ್ರದರ್ಶನ ನೀಡಿಲ್ಲ.

ಪ್ರಸಿಧ್ ಕೃಷ್ಣ
ಕೋಲ್ಕತ್ತಾ ನೈಟ್ ರೈಡರ್ಸ್ ಮುಖ್ಯ ಬೌಲರ್ ಆಗಿದ್ದ ಕರ್ನಾಟಕದ ಪ್ರತಿಭೆ ಪ್ರಸಿಧ್ ಕೃಷ್ಣಗೆ ಈಗ ಆಡುವ ಹನ್ನೊಂದರಲ್ಲಿ ಸ್ಥಾನವೇ ಸಿಗುತ್ತಿಲ್ಲ. 2019ರಲ್ಲಿ ಉತ್ತಮವಾಗಿ ಆಡಿದ್ದರೂ ಕೃಷ್ಣ ಬದಲಿಗೆ ನಾಗರಕೋಟಿ, ಮಾವಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ.
ಯಾವ ತಂಡಗಳಿಗೆ: ಪಂಜಾಬ್, ರಾಜಸ್ಥಾನ, ಚೆನ್ನೈ, ಬೆಂಗಳೂರು
ಉತ್ತಮ ಬೌಲರ್ ಕೊರತೆ ಹೊಂದಿರುವ ಈ ತಂಡಗಳು ಸುಲಭವಾಗಿ ಕೃಷ್ಣರನ್ನು ಟ್ರೇಡ್ ಮಾಡಬಹುದು. ಆರ್ ಸಿಬಿ ಉಮೇಶ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಗೆ ಹೆಚ್ಚಿನ ಅವಕಾಶ ನೀಡಿದರೂ ಉತ್ತಮ ಫಲಿತಾಂಶ ಬಂದಿಲ್ಲ. ಚೆನ್ನೈನಲ್ಲಿ ವಿಕೆಟ್ ತೆಗೆಯುವ ಬೌಲರ್ ಗಳ ಕೊರತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications