Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

''ನನ್ನ ತಾಯಿ ನನ್ನ ದೊಡ್ಡ ಫ್ಯಾನ್, ಮಿಸ್ ಯೂ'' ಎಂದ ರಶೀದ್ ಖಾನ್

IPL 2020: Miss my mother, she was my biggest fan, says Sunrisers Hyderabads Rashid Khan

ಅಫ್ಘಾನಿಸ್ತಾನದ ಯುವ ಪ್ರತಿಭಾವಂತ ಕ್ರಿಕೆಟರ್ ರಶೀದ್ ಖಾನ್ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿರುವ ರಶೀದ್ ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಡೆಲ್ಲಿ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿ ಉತ್ತಮ ಬೌಲಿಂಗ್ ಮಾಡಿದ್ದಲ್ಲದೆ ಪಂದ್ಯದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು.

ಪಂದ್ಯ ಪುರುಷೋತ್ತಮ ಎನಿಸಿಕೊಂಡ ರಶೀದ್ ಖಾನ್, ಪ್ರಶಸ್ತಿ ಕೈಗೆತ್ತಿಕೊಂಡು ಭಾವುಕರಾದರು. ಕಳೆದ ಒಂದು ವರ್ಷ ನನ್ನ ಪಾಲಿಗೆ ತುಂಬಾ ಕಠಿಣವಾಗಿತ್ತು. ನನ್ನ ತಾಯಿಯನ್ನು ಕಳೆದುಕೊಂಡ ದುಃಖ ಇನ್ನೂ ಹಾಗೆ ಇದೆ. ಈ ಪ್ರಶಸ್ತಿಯನ್ನು ನಾನು ನನ್ನ ತಾಯಿಗೆ ಅರ್ಪಿಸುತ್ತೇನೆ. ಆಕೆ ನನ್ನ ದೊಡ್ಡ ಫ್ಯಾನ್ ಆಗಿದ್ದಳು. ನನ್ನನ್ನು ಪ್ರತಿ ಹಂತದಲ್ಲೂ ಪ್ರೋತ್ಸಾಹಿಸುತ್ತಿದ್ದಳು ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 15 ರನ್ ಗಳ ಭರ್ಜರಿ ಜಯ ದಾಖಲಿಸಲು ರಶೀದ್ ಖಾನ್ ಕೂಡಾ ಕಾರಣರಾದರು. ಮೊದಲ ಎರಡು ಮೂರು ಎಸೆತಗಳನ್ನು ಸ್ವಲ್ಪ ವೇಗವಾಗಿ ಬೌಲ್ ಮಾಡಿದೆ. ಸರಿಯಾದ ಲೆಂಗ್ತ್ ಗುರುತಿಸುವುದು ಇಂಥ ಪಿಚ್ ಗಳಲ್ಲಿ ತುಂಬಾ ಮುಖ್ಯ. ಬ್ಯಾಕ್ ಆಫ್ ದಿ ಲೆಂಗ್ತ್ ಎಸೆತಗಳನ್ನು ಹಾಕಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಬೇಕು. ನಾಯಕ ವಾರ್ನರ್ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದರು.

ರಶೀದ್ ಖಾನ್ ಅವರು 4 ಓವರ್ ಗಳಲ್ಲಿ 14 ರನ್ನಿತ್ತು 3 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಎನಿಸಿಕೊಂಡರು.

Story first published: Thursday, October 1, 2020, 9:56 [IST]
Other articles published on Oct 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+