ಔಟ್ ಆದ ಬಳಿಕ ವರುಣ್ ಜೊತೆ ಮಾತನಾಡಿದ ಧೋನಿ: ವಿಡಿಯೋ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ವರುಣ್ ಚಕ್ರವರ್ತಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್ ಎಸೆದಿದ್ದ ಚಕ್ರವರ್ತಿ 20 ರನ್ ನೀಡಿ 2 ವಿಕೆಟ್ ಮುರಿಸಿದ್ದರು. ಈ ಎರಡು ವಿಕೆಟ್‌ಗಳಲ್ಲಿ ಚೆನ್ನೈ ನಾಯಕ ಎಂಎಸ್ ಧೋನಿಯ ವಿಕೆಟ್ ಕೂಡ ಸೇರಿತ್ತು.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಂಎಸ್‌ಡಿ, ಚಕ್ರವರ್ತಿ ಅವರ 14.4ನೇ ಓವರ್‌ನಲ್ಲಿ ಬೌಲ್ಡ್ ಆಗಿ ಕೇವಲ 1 ರನ್‌ಗೆ ನಿರ್ಗಮಿಸಿದ್ದರು. ವಿಶೇಷವೆಂದರೆ ಹಿಂದಿನ ಪಂದ್ಯದಲ್ಲೂ ಚಕ್ರವರ್ತಿಗೇ ಧೋನಿ ವಿಕೆಟ್ ಒಪ್ಪಿಸಿದ್ದರು.
ಆದರೆ ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ನೆರವಿನಿಂದ ಪಂದ್ಯದಲ್ಲಿ ಚೆನ್ನೈ 6 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಪಂದ್ಯದ ಬಳಿಕ ಕೆಕೆಆರ್‌ನ ವರುಣ್ ಚಕ್ರವರ್ತಿ ಜೊತೆ ಎಂಎಸ್‌ಡಿ ಮಾತನಾಡಿದ್ದರು. ಈ ವಿಡಿಯೋವನ್ನು ಕೆಕೆಆರ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.
'ಚೆಪಕ್ ಸ್ಟೇಡಿಯಂನಲ್ಲಿ ಧೋನಿಯನ್ನು ಬೆಂಬಲಿಸುವುದರಿಂದ ಹಿಡಿದು ಇಲ್ಲೀವರೆಗೆ.. ಚಕ್ರವರ್ತಿಯ ಕಾಲ್ಪನಿಕ ಕಥೆ ಮುಂದುವರೆಯುತ್ತದೆ!' ಎಂದು ಕೆಕೆಆರ್ ವಿಡಿಯೋ ಟ್ವೀಟ್ ಜೊತೆ ಬರೆದುಕೊಂಡಿದೆ. ಪಂದ್ಯದ ಬಳಿಕ ಧೋನಿ, ವರುಣ್‌ಗೆ ಇನ್ನಷ್ಟು ಟಿಪ್ಸ್ ನೀಡುತ್ತಿರುವ ಚಿತ್ರಣ ವಿಡಿಯೋದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications